ಐಟಿ ದಾಳಿ ಮೂಲಕ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ : ಎಂ.ಕೆ.ಸ್ಟಾಲಿನ್

Prasthutha|

ಅರಿಯಲೂರ್: ತಮ್ಮ ಪುತ್ರಿಯ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದುದರ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ತಮ್ಮ ಪಕ್ಷವನ್ನು ಐಟಿ ದಾಳಿ ಮೂಲಕ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

- Advertisement -

‘ನಾನು ಇಂದು ಬೆಳಿಗ್ಗೆ ಚುನಾವಣಾ ಪ್ರಚಾರಕ್ಕೆ ಹೋಗುವಾಗ, ಚೆನ್ನೈನ ನನ್ನ ಮಗಳ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವ ವಿಷಯ ತಿಳಿಯಿತು. ‘ಐಟಿ ದಾಳಿಗಳ ಮೂಲಕ ಹೆದರಿಸಲು ನಾವು ಎಐಎಡಿಎಂಕೆ ಅಲ್ಲ. ನಾವು ಡಿಎಂಕೆ’ ಎಂದು ಸ್ಟಾಲಿನ್ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಸುಮಾರು 100 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ 30 ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.  ಎಐಎಡಿಎಂಕೆ ನಾಯಕರ ಕಚೇರಿಗಳ ಮೇಲೆಯೂ ಇದೇ ರೀತಿಯ ದಾಳಿಗಳನ್ನು ನಡೆಸಿ ಕೇಂದ್ರ ಸರಕಾರವು ಪಕ್ಷವನ್ನು ನಿಯಂತ್ರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ದಾಳಿ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಎಐಎಡಿಎಂಕೆ ಅಲ್ಲ. ನಾವು ಡಿಎಂಕೆ ಎಂದು ಗುಡುಗಿದ್ದಾರೆ.



Join Whatsapp