“ಪ್ರಧಾನಮಂತ್ರಿಗಳೇ ದಯವಿಟ್ಟು ನಮ್ಮ ಕ್ಷೇತ್ರದಲ್ಲೂ ಪ್ರಚಾರ ಮಾಡಿ”

Prasthutha|

ಚೆನ್ನೈ: ಪ್ರಧಾನಮಂತ್ರಿಗಳೇ ದಯವಿಟ್ಟು ನಮ್ಮ ಕ್ಷೇತ್ರದಲ್ಲಿಯೂ ಪ್ರಚಾರ ಮಾಡಿ ಎಂದು ಮೋದಿಯನ್ನು ಅಪಹಾಸ್ಯ ಮಾಡಿ ಡಿಎಂಕೆ ಅಭ್ಯರ್ಥಿಗಳು ಟ್ವೀಟ್ ಮಾಡಿದ್ದಾರೆ. ಡಿಎಂಕೆ ಅಭ್ಯರ್ಥಿಗಳು ಡಿಎಂಕೆ ವಿಜಯ ಸಾಧಿಸಲು ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರಕ್ಕೆ ಬರಬೇಕೆನ್ನುವ ರೀತಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

- Advertisement -

“ಪ್ರೀತಿಯ ಪ್ರಧಾನ ಮಂತ್ರಿಗಳೇ ದಯವಿಟ್ಟು ನನ್ನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬನ್ನಿ, ನಾನು ಈ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಯಾಗಿದ್ದೇನೆ. ತಮ್ಮ ಆಗಮನವು ನನ್ನ ಬಹುಮತವನ್ನು ಹೆಚ್ಚಿಸಿ ಗೆಲುವು ಸಾಧಿಸಲು ಸಹಾಯವಾಗಲಿದೆ” ಎಂದು ಅಭ್ಯರ್ಥಿಗಳು ಸಾಮೂಹಿಕವಾಗಿ ಟ್ವೀಟ್ ಮಾಡಿದ್ದಾರೆ. ಮೋದಿ ಬಂದು ತಮ್ಮ ವಿರುದ್ಧ ಪ್ರಚಾರ ಮಾಡಿದರೆ ತಮಗೆ ಬಹುಮತ ಹೆಚ್ಚಾಗಲಿದೆ ಎಂಬ ರೀತಿಯಲ್ಲಿ ಡಿಎಂಕೆ ಅಭ್ಯರ್ಥಿಗಳು ಟ್ವೀಟ್‌ ಮಾಡಿದ್ದಾರೆ.

Join Whatsapp