ಬೆಳ್ತಂಗಡಿ | ದನಗಳ್ಳರೆಂದು ಆರೋಪಿಸಿ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ | ಏಳು ಮಂದಿ ದುಷ್ಕರ್ಮಿಗಳ ಬಂಧನ

Prasthutha|

ಮಂಗಳೂರು : ಪಿಕಪ್ ವಾಹನದಲ್ಲಿ ಸಂಬಂಧಿಕರ ಮನೆಗೆ ಹೋಗಿ ಊಟ ಮಾಡಿ ವಾಪಸ್ ಬರುವಾಗ ದನ ಕಳ್ಳರು ಎಂದು ಆರೋಪಿಸಿ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನಲ್ಲಿ ನಡೆದಿದೆ. ಕುಪ್ಪೆಟ್ಟಿಯ ರಹಿಮಾನ್ ಎಂಬುವವರು ನಿನ್ನೆ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ನ ಬಾಡಿ ಕೆಲಸ ಮಾಡಿಸಲು ಹೋಗಿದ್ದರು‌. ಇವರ ಜೊತೆಗೆ ಮುಸ್ತಾಫ ಎಂಬುವವರು ಕೂಡಾ ಇವರ ಜೊತೆಗಿದ್ದರು.

- Advertisement -


ವಾಹನ ಕೆಲಸ ಆಗದ ಕಾರಣ ರಹಿಮಾನ್ ರವರು ತನ್ನ ಸಂಬಂಧಿಕರ ಮನೆ ಇರುವ ಸವಣಾಲಿಗೆ ಹೋಗಿ ಊಟ ಮಾಡಿ ವಾಪಸ್ ಬರುತ್ತಿದ್ದರು. ಇದೇ ವೇಳೆ ಸವಣಾಲಲ್ಲಿ ಬೈಕ್, ಕಾರುಗಳಲ್ಲಿ ಬೆನ್ನಟ್ಟಿದ್ದ ತಂಡ ಮೇಲಂತಬೆಟ್ಟು ಬರುತ್ತಿದ್ದಂತೆ ದುಷ್ಪರ್ಮಿಗಳು ಪಿಕಪನ್ನು ಅಡ್ಡಗಟ್ಟಿ ನೀವು ದನ ಕಳ್ಳರು ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಪಿಕಪ್ ನಲ್ಲಿದ್ದ ರಹಿಮಾನ್ ಮತ್ತು ಮುಸ್ತಫಾ ಮೇಲೆ ರಾಡ್, ಕೋಲಿನಿಂದ ಹಲ್ಲೆ ಮಾಡಿದ್ದಾರೆ. ದಾಳಿಯಿಂದ ರಹಿಮಾನ್ ರ ಒಂದು ಕಣ್ಣಿಗೆ ಗಾಯವಾಗಿದ್ದು ದೇಹದ ಬಹುತೇಕ ಭಾಗಕ್ಕೆ ಗಾಯವಾಗಿದೆ. ಮುಸ್ತಾಫಾರಿಗೂ ಗಾಯವಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ಸ್ಥಳೀಯರು ನೀಡಿದ್ದು ಪೊಲೀಸರು ಬಂದು ಗುಂಪು ಚದುರಿಸಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಹಲ್ಲೆ ನಡೆಸಿದ ಏಳು ದುಷ್ಕರ್ಮಿಗಳ ಬಂಧನ

- Advertisement -

ಇದೇ ವೇಳೆ ಹಲ್ಲೆ ನಡೆಸಿದ ಏಳು ಮಂದಿ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಭಟ್, ರಾಜೇಶ್ ಭಟ್, ಗುರುಪ್ರಸಾದ್, ಚಿದಾನಂದ ಮತ್ತು ಲೋಕೇಶ್ ಮತ್ತು ಇತರೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕಲಂ 143, 147, 149, 323, 324, 326, 341, 355, 427, 506 ಮತ್ತು
504 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Join Whatsapp