ಮಂಗಳೂರು ವಿವಿಯಲ್ಲಿ ಕುಲಪತಿ ಸ್ಥಾನಕ್ಕಾಗಿ ನಡೆದ ಲಂಚ ಪ್ರಕರಣ | ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿ : ಕ್ಯಾಂಪಸ್ ಫ್ರಂಟ್

Prasthutha|

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಿಂದ 17.5 ಲಕ್ಷ ಹಣವನ್ನು ಪಡೆದು ಮೋಸ ಮಾಡಿದ ಪ್ರಕರಣದಲ್ಲಿ ರಾಮಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರನನ್ನು ಇದೀಗಾಗಲೇ  ಬಂಧಿಸಲಾಗಿದ್ದು, ಆದರೆ ಇದರ ಹಿಂದೆ ಹಲವಾರು ಕಾಣದ ಕೈಗಳಿವೆ, ಈ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.

    ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನಗಳು ಲಂಚ ನೀಡಿದರೆ ಯಾರಿಗೂ ಸಿಗುತ್ತೆ ಎಂಬ ಆಘಾತಕಾರಿ ವಿಷಯವಾಗಿದೆ ಇದರಲ್ಲಿರುವಂತಹದು, ಲಂಚ ನೀಡಿ ಕುಲಪತಿ ಸ್ಥಾನಕ್ಕೆ ಮೊರೆಯಿಟ್ಟ ಪ್ರಾಧ್ಯಾಪಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸ್ಥಾನಕ್ಕೆ ಕಳಂಕ, ಅವರ ಮೇಲೆ ವಿಶ್ವವಿದ್ಯಾನಿಲಯವು ನಿರ್ದಾಕ್ಷಿಣ್ಯವಾಗಿ ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳ ಹಿಂದಿರುವ ರಾಜಕೀಯ ಮುಖಂಡರುಗಳ ಮೇಲೆಯೂ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ ಸಿರಾಜ್ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -