ಪ್ರತಿಸ್ಪರ್ಧಿ ಜೋ ಬೈಡನ್‌‌ಗೆ ಬಹಿರಂಗ ಸವಾಲು ಹಾಕಿದ ಟ್ರಂಪ್

Prasthutha|

ವಾಷಿಂಗ್ಟನ್‌: ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಪ್ರತಿಸ್ಪರ್ಧಿ ಜೋ ಬೈಡನ್‌‌ಗೆ ಬಹಿರಂಗ ಸವಾಲು ಹಾಕಿದ್ದಾರೆ. ಈ ವಾರ ತಮ್ಮ ಜೊತೆ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ.

- Advertisement -

ಫ್ಲಾರಿಡಾದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಜಗತ್ತಿನ ಎದುರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಜೋ ಬೈಡನ್‌ ಅವರಿಗೆ ಅಧಿಕೃತವಾಗಿ ಅವಕಾಶ ನೀಡುತ್ತಿದ್ದೇನೆ. ಈ ವಾರ ಮತ್ತೊಂದು ಚರ್ಚೆ ನಡೆಸೋಣ. ಈ ಬಾರಿ ನೇರಾನೇರ ಚರ್ಚೆ ಇರಲಿ, ಮಧ್ಯಸ್ಥಿಕೆಗೆ ಯಾರೂ ಬೇಡ. ಎಲ್ಲಿ, ಯಾವಾಗಲಾದರೂ ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಬೈಡನ್‌ ಅವರ ಬಳಗವು ಟ್ರಂಪ್‌ ಸವಾಲುಗಳನ್ನು ಸ್ವೀಕರಿಸಲು ನಿರಾಕರಿಸಿದೆ.‌

- Advertisement -

ಟ್ರಂಪ್‌ ಕ್ಷುಲ್ಲಕ ಬೇಡಿಕೆಗಳಿಗೆ ಸ್ಪಂದಿಸಲು ಬೈಡನ್ ಅವರ ಬಳಿ ಸಮಯ ಇಲ್ಲ. ಅಮೆರಿಕವನ್ನು ಮುನ್ನಡೆಸುವುದರಲ್ಲಿ ಅವರು ನಿರತರಾಗಿದ್ದಾರೆ. ಟ್ರಂಪ್‌ ಸುಳ್ಳುಗಾರ, ಅಪರಾಧಿ ಮತ್ತು ವಂಚಕ ಎಂದು ಬೈಡನ್‌ ಅವರ ವಕ್ತಾರ ಜೇಮ್ಸ್‌ ಸಿಂಗರ್‌ ಹೇಳಿದ್ದಾರೆ.

ಜೂನ್‌ 27ರಂದು ನಡೆದ ಚರ್ಚೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್‌ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಇದಾದ ನಂತರ ಪಕ್ಷದ ಸಹೋದ್ಯೋಗಿಗಳೇ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರನ್ನು ಒತ್ತಾಯಿಸಿದ್ದರು. ಬೈಡನ್‌ ಇದನ್ನು ನಿರಾಕರಿಸಿದ್ದಾರೆ.



Join Whatsapp