ಬಾಬಾಬುಡನ್ ಗಿರಿಯಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆಗೆ SDPI ಮನವಿ

Prasthutha|

ಚಿಕ್ಕಮಗಳೂರು : ಜಿಲ್ಲೆಯ ಬಾಬಾ ಬುಡನ್ ದರ್ಗಾದ ಉರೂಸ್ ಆಚರಣೆ ಸಂದರ್ಭ 1975 ಕ್ಕಿಂತ ಮೊದಲು ಆಚರಣೆಯಲ್ಲಿದ್ದ ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶವು ಎತ್ತಿಹಿಡಿದ ರೀತಿಯಲ್ಲಿ ನಿರ್ವಹಿಸಬೇಕು ಎಂದು SDPI ನಿಯೋಗ ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

- Advertisement -

ದರ್ಗಾದ ಒಳಗೆ ಮತ್ತು ಹೊರಗೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲು ಸಜ್ಜಾದ ನಶೀನ್‌ಗೆ ಅನುಮತಿಸಬೇಕು ಈ ತಿಂಗಳಿನ 29,30 ಹಾಗೂ 31 ರಂದು ಮೂರು ದಿನಗಳ ಕಾಲ ನಡೆಯಲಿರುವ ಸಂದಲ್ – ಉರೂಸ್ ಕಾರ್ಯಕ್ರಮಕ್ಕೆ ಅಗತ್ಯ ಪೋಲೀಸ್ ಬಂದೋಬಸ್ತ್ ಹಾಗೂ ನೆರವನ್ನು ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ SDPI ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಮಂಡಳಿ ಸಮಿತಿ ಸದಸ್ಯ ಅಕ್ರಂ ಹಸನ್‍, ಇಮ್ರಾನ್ ರಫಾಯಿ, ಚಿಕ್ಕಮಗಳೂರು ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಝ್ಮತ್ ಪಾಷ , ಚಾಂದ್ ಪಾಷಾ , ಅಂಜುಮನ್ ಇಸ್ಲಾಂ ಕಾರ್ಯದರ್ಶಿ ಮುನೀರ್, ಸದಸ್ಯ ಶಾದಬ್ ಉಪಸ್ಥಿತರಿದ್ದರು.



Join Whatsapp