ಮುಸ್ಲಿಮ್ ಲೀಗಿನ ಕುಂಞಾಲಿಕುಟ್ಟಿ ಸ್ಪರ್ಧಿಸುವ ವೇಂಗರ ವಿಧಾನ ಸಭಾ ಕ್ಷೇತ್ರದಲ್ಲಿ ತೃತೀಯ ಲಿಂಗಿ ಅನನ್ಯಾ ಸ್ಪರ್ಧೆ !

Prasthutha|

28 ವರ್ಷದ ಅನನ್ಯಾ ಕುಮಾರಿ ಅಲೆಕ್ಸ್ ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ತಯಾರಿಯಲ್ಲಿದ್ದಾರೆ.  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅನನ್ಯಾ ಅವರು ವೇಂಗರ ವಿಧಾನಸಭಾ ಕ್ಷೇತ್ರದಲ್ಲಿ  ಈ ಬಾರಿ ಸ್ಪರ್ಧಿಸಲಿದ್ದಾರೆ. ಮಹತ್ವದ ವಿಷಯವೇನೆಂದರೆ ಅವರು ಸ್ಪರ್ಧಿಸುವ ವೇಂಗರ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಮುಸ್ಲಿಮ್ ಲೀಗಿನ ಸಂಸದನಾಗಿದ್ದು ರಾಜ್ಯ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜೀನಾಮೆ ನೀಡಿರುವ ಕುಂಞಾಲಿಕುಟ್ಟಿ ಅನನ್ಯಾ ಅವರ ಎದುರಾಳಿಯಾಗಿದ್ದಾರೆ.

- Advertisement -

 ಕುಂಞಾಲಿಕುಟ್ಟಿ ಜೊತೆಗೆ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಪಿ ಜಿಜಿ ಅವರೂ ಅದೇ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಇದೇ ವೇಳೆ ಪ್ರತಿಸ್ಪರ್ಧಿ ಕುಂಞಾಲಿಕುಟ್ಟಿ ಅವರು ಅನನ್ಯಾ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತೃತೀಯ ಲಿಂಗಿಗಳು ಈ ಸಮಾಜದ ಭಾಗವಾಗಿದ್ದಾರೆ ಮತ್ತು ಅವರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದು ಕುಂಞಾಲಿಕುಟ್ಟಿ ಹೇಳಿದ್ದಾರೆ.

ಅನನ್ಯಾ ಅವರು ಈ ಹಿಂದೆ ಕೇರಳದ ಪ್ರಪ್ರಥಮ ತೃತೀಯ ಲಿಂಗಿ ರೇಡಿಯೋ ಜಾಕಿ ಹಾಗೂ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಇದೀಗ ಚುನಾವಣೆಯಲ್ಲೂ ತಮ್ಮ ಸಾಧನೆಯ ಓಟವನ್ನು ಮುಂದಿವರಿಸಿದ್ದಾರೆ. ಡೆಮಾಕ್ರಟಿಕ್ ಸೋಶಿಯಲ್ ಜಸ್ಟಿಸ್ ಪಾರ್ಟಿಯಿಂದ ಅವರು ಸ್ಪರ್ಧಿಸುತ್ತಿದ್ದಾರೆ. ನಮಗೆ ಯಾವುದೇ ಸಹಾನುಭೂತಿ ಬೇಡ. ನಾವು ಯಾವುದೇ ಪುರುಷ ಮತು ಮಹಿಳೆಯರಂತೆ ಯಾವುದೇ ಜವಬ್ದಾರಿಗಳನ್ನು ನಿಭಾಯಿಸಲು ಸಮರ್ಥರು ಎನ್ನುವುದನ್ನು ನಾನು ಸಾಧಿಸಿ ತೋರಿಸುತ್ತೇನೆ ಎಂದು ಅನನ್ಯಾ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ.

Join Whatsapp