ಇಸ್ರೇಲ್ ದಾಳಿ: ಒಟ್ಟು 38 ಸಾವಿರ ಪ್ಯಾಲೆಸ್ತೀನ್ ಪ್ರಜೆಗಳು ಮೃತ

Prasthutha|

ಗಾಝಾ: ಇಸ್ರೇಲ್ ಪ್ಯಾಲೆಸ್ತೀನ್‌ನಲ್ಲಿ ಭೀಕರ ದಾಳಿ ಆರಂಭಿಸಿದಂದಿನಿಂದ ಸಾವಿಗೀಡಾದವರ ಸಂಖ್ಯೆ 38 ಸಾವಿರದ ಗಡಿ ದಾಟಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

- Advertisement -

ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ಮೂಲಗಳು ತಿಳಿಸಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 58 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಸಾವಿನ ಸಂಖ್ಯೆ 38,011ಕ್ಕೆ ತಲುಪಿದೆ ಎಂದಿದೆ.

- Advertisement -

ಇಸ್ರೇಲ್ ದಾಳಿ ಎಷ್ಟು ಕ್ರೂರವಾಗಿದೆ ಎಂದರೆ ಆಸ್ಪತ್ರೆ, ನಿರಾಶ್ರಿತರ ಶಿಬಿರ ನೋಡದೆ ಹೀಗೆ ಇಸ್ರೇಲ್ ಸೈನಿಕರು ನಿರ್ದಯ ದಾಳಿ ಮಾಡುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಗಾಝಾ ಪಟ್ಟಿಯ ವಿವಿಧ ಪ್ರದೇಶಗಳನ್ನ ಗುರಿಯಾಗಿಸಿ ಇಸ್ರೇಲ್ ಬಾಂಬ್‌ ಮಳೆಗರೆ, ಸಾವಿರಾರು ಪ್ಯಾಲೆಸ್ತೀನ್ ಪ್ರಜೆಗಳು ಸಾವೀಗೀಡಾಗುತ್ತಿದ್ದಾರೆ. ಉಳಿದವರು ತಮ್ಮ ಮನೆ & ಕಟ್ಟಡ ಬಿಟ್ಟು ಓಡಿ ಹೋಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರು ಕೂಡ ಇಸ್ರೇಲ್ ಸೈನಿಕರು ಮಾತ್ರ ಭೀಕರ ಅಟ್ಯಾಕ್ ಮುಂದುವರೆಸಲು ಸಜ್ಜಾಗಿರುವ ಆರೋಪ ಕೇಳಿಬಂದಿದೆ.



Join Whatsapp