ಪೋರ್ಷೆ ಕಾರು ಅಪಘಾತ: ಅಪಹರಣ ಪ್ರಕರಣದಲ್ಲಿ ಬಾಲಾಪರಾಧಿ ತಂದೆ, ಅಜ್ಜನಿಗೆ ಜಾಮೀನು

Prasthutha|

ಪುಣೆ: ಪೋರ್ಷೆ ಅಪಘಾತ ಪ್ರಕರಣದಲ್ಲಿ ಬಾಲಾಪರಾಧಿಯನ್ನು ರಕ್ಷಿಸುವುದಕ್ಕಾಗಿ ಕುಟುಂಬದ ಕಾರು ಚಾಲಕನನ್ನು ಅಪಹರಿಸಿದ್ದ ಆರೋಪ ಎದುರಿಸುತ್ತಿರುವ ಬಾಲಕನ ತಂದೆ ಹಾಗೂ ಅಜ್ಜನಿಗೆ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ.

- Advertisement -


ಪುಣೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಬಾಲಾಪರಾಧಿಯ ತಂದೆ ಹಾಗೂ ಅಜ್ಜನನ್ನು ಅಪಹರಣ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.


ಮೇ 19 ರ ಮುಂಜಾನೆ ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ 17 ವರ್ಷದ ಬಾಲಕ ಕುಡಿದ ಮತ್ತಿನಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಇಬ್ಬರು ಮೋಟಾರ್ ಬೈಕ್ ನಲ್ಲಿದ್ದ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.



Join Whatsapp