ಬಿಜೆಪಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸುಲಿಗೆಕೋರ ಪಕ್ಷ: ಮಮತಾ ವಾಗ್ದಾಳಿ

Prasthutha|

ಕೋಲ್ಕತ್ತ: ಬಿಜೆಪಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಸುಲಿಗೆಕೋರ ಪಕ್ಷವಾಗಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

- Advertisement -

‘ಸಾಮಾನ್ಯ ಮನುಷ್ಯನೊಬ್ಬ ಕೇವಲ 500ರೂ. ಕಳ್ಳತನ ಮಾಡಿದರೆ ಅವನನ್ನು ಸುಲಿಗೆಕೋರನೆಂದು ಕರೆಯಲಾಗುತ್ತಿದೆ. ಆದರೆ, ಬಿಜೆಪಿಯು ಸಾಮಾನ್ಯ ಜನರಿಂದ ಹಲವು ಲಕ್ಷ ಕೋಟಿ ರೂಪಾಯಿ ಹಣವನ್ನು ದೋಚುತ್ತಿದೆ. ಬಿಜೆಪಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಸುಲಿಗೆಕೋರ ಪಕ್ಷವಾಗಿದೆ’ ಎಂದು ಪಶ್ಚಿಮ ಬಂಗಾಳದ ಖೆಜುರಿ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

 ‘ಜನರಿಗೆ ಸರಿಯಾಗಿ ಕೋವಿಡ್ ಲಸಿಕೆಗಳು ಸಿಗುತ್ತಿಲ್ಲ. ಕೊರೊನಾ ವೈರಸ್ ಸೋಂಕು ಮತ್ತೆ ಹರಡಲು ಪ್ರಾರಂಭಿಸಿದೆ. ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಮಮತಾ ಆರೋಪಿಸಿದ್ದಾರೆ.

- Advertisement -

‘ಬಂಗಾಳದ ಜನರಿಗೆ ಶಾಂತಿ ಬೇಕೆಂದರೆ, ರಾಜ್ಯವು ಗಲಭೆಗಳಿಂದ ಮುಕ್ತವಾಗಿ ಇರಬೇಕೆಂದರೆ ಟಿಎಂಸಿ ಪಕ್ಷವೊಂದೇ ಪರಿಹಾರ. ಬಂಗಾಳದಲ್ಲಿ ಅಧಿಕಾರ ನಡೆಸಲು ಬಿಜೆಪಿಯಂತಹ ಪಕ್ಷಕ್ಕೆ ಅವಕಾಶ ನೀಡಲೇಬಾರದು. ಗಲಭೆಗಳನ್ನು ಆಯೋಜಿಸುವ, ಜನರನ್ನು ಕೊಲ್ಲುವ ಮತ್ತು ದಲಿತ ಮಹಿಳೆಯರನ್ನು ಹಿಂಸಿಸುವ ಕ್ರಿಯೆಗಳಲ್ಲಿ ಬಿಜೆಪಿ ತೊಡಗಿದೆ’ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27ರಂದು ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.



Join Whatsapp