ಮೋದಿ ವಿರುದ್ಧ ಮಾತನಾಡುವುದು ಪ್ರಜಾಪ್ರಭುತ್ವ ವಿರೋಧಿ ಎಂದ ಬಿಜೆಪಿ ನಾಯಕ

Prasthutha|

ಕೋಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡುವುದು ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವುದಕ್ಕೆ ಸಮಾನವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಸ್ಪರ್ಧಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ.

- Advertisement -

ನೀವು ಮೋದಿಯ ಲಸಿಕೆಯನ್ನು ಸ್ವೀಕರಿಸಬೇಕು. ಮೋದಿಯವರು ಚುನಾಯಿತ ಪ್ರಧಾನಿಯಾಗಿರುವುದರಿಂದ ಅವರ ವಿರುದ್ಧ ಮಾತನಾಡುವುದು ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವುದಕ್ಕೆ ಸಮಾನವಾಗಿದೆ. ಅವರ ವಿರುದ್ಧ ಮಾತನಾಡುವುದು ಭಾರತ ಮಾತೆಯ ವಿರುದ್ಧ ಮಾತನಾಡುವುದಕ್ಕೆ ಸಮಾನ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಲಸಿಕೆ ಇಲ್ಲ. “ಆದ್ದರಿಂದ ನೀವು ಪ್ರಧಾನಿ ಮೋದಿಯ ಲಸಿಕೆಯನ್ನು ಸ್ವೀಕರಿಸಬೇಕು” ಎಂದು ಅವರು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳಿದ್ದಾರೆ.

ಜನವರಿಯಿಂದ ರಾಷ್ಟ್ರವ್ಯಾಪಿ ವ್ಯಾಕ್ಸಿನ್ ವಿತರಣೆಯ ಹೊರತಾಗಿಯೂ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಗಂಭೀರ ಏರಿಕೆ ಕಂಡುಬಂದಿದೆ ಎಂಬ ತೃಣಮೂಲ ಕಾಂಗ್ರೆಸ್ ನ ಟೀಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ತಿಂಗಳ ಹಿಂದೆ ಬಿಜೆಪಿಗೆ ಸೇರುವ ಮೊದಲು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಸಿನ ಆಪ್ತನಾಗಿದ್ದ ಸುವೇಂದು ಅಧಿಕಾರಿ ನಂದಿಗ್ರಾಮ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

- Advertisement -



Join Whatsapp