ಇಂದು ಮಲೆನಾಡಿನ ಶಿವಮೊಗ್ಗದಲ್ಲಿ ರೈತರ ಮಹಾ ಪಂಚಾಯತ್
Prasthutha: March 20, 2021
ದೆಹಲಿ ರೈತ ಹೋರಾಟದ ನಾಯಕರು ಕರ್ನಾಟಕಕ್ಕೆ

ಶಿವಮೊಗ್ಗ: ಕೇಂದ್ರ ಸರಕಾರದ ವಿವಾದಿತ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ರಸ್ತೆಯಲ್ಲಿದ್ದಾರೆ. ಸರಕಾರ ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ದಿನೇ ದಿನ ಪ್ರತಿಭಟನೆಯ ಕಾವು ಹೆಚ್ಚಾಗ್ತಿದೆ. ಕರ್ನಾಟಕದಲ್ಲೂ ರೈತರು ಸರಕಾರದ ವಿರುದ್ಧ ತೊಡೆತಟ್ಟಿ ಸವಾಲು ಎಸೆದಿದ್ದರು. ಮುಂದುವರಿದ ಭಾಗವಾಗಿ ಇಂದು ಮಲೆನಾಡು ಶಿವಮೊಗ್ಗದಲ್ಲಿ ಪ್ರಪ್ರಥಮ ಮಹಾ ಪಂಚಾಯತ್ “ರೈತರ ಮಹಾ ಪಂಚಾಯತ್” ಸಂಜೆ 3ಕ್ಕೆ ಪ್ರಾರಂಭವಾಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್, ಯದುವೀರ್ ಸಿಂಗ್ ಮತ್ತಿತರ ರೈತ ನಾಯಕರು ಮಹಾ ಪಂಚಾಯತ್ ನಲ್ಲಿ ಭಾಗವಹಿಸಲಿದ್ದಾರೆ.
