ಒಂದು ದೇಶ ಒಂದು ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರಲಿ : ಶಾಸಕ ಯುಟಿ ಖಾದರ್

Prasthutha|

ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ  ಮಂಗಳೂರು ನಗರ ಯು.ಟಿ ಖಾದರ್ ಅವರು, “ರಾಜ್ಯದಲ್ಲಿ ಗೋಹತ್ಯೆ ಕಾನೂನು ಇದೆ. ಆದರೆ ಅದು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ದೇಶದಲ್ಲಿ ಗೋಹತ್ಯೆ ವಿಚಾರವಾಗಿ ಒಂದೇ ಮಾದರಿ ಕಾನೂನು ಜಾರಿಯಾಗಲಿ. ಗೋಹತ್ಯೆ ವಿಚಾರವಾಗಿ ಕರ್ನಾಟಕ, ಗೋವಾ, ಕೇರಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರಗಳು  ಭಿನ್ನ ನಿಲುವು ಏಕೆ ತಳೆದಿದೆ” ಎಂದವರು ಪ್ರಶ್ನಿಸಿದ್ದಾರೆ.  

- Advertisement -

ಗೋವಿನ ಬಗ್ಗೆ ಬಿಜೆಪಿಗೆ ನಿಜವಾದ ಕಾಳಜಿ ಇದ್ದರೆ ವಿದೇಶಗಳಿಗೆ ಗೋಮಾಂಸ ರಫ್ತು ಬ್ಯಾನ್ ಮಾಡಿ ಎಂದು ಕೂಡಾ ಯುಟಿ ಖಾದರ್ ಆಗ್ರಹಿಸಿದ್ದಾರೆ.  ಇದೇ ವೇಳೆ ಮಾತನಾಡಿದ ಅವರು, “ಸರ್ಕಾರ ಪಶು ಭಾಗ್ಯ ಯೋಜನೆ ರದ್ದು ಮಾಡಿದೆ. ಇದರಿಂದ ಬಡವರಿಗೆ ಅನಾನುಕೂಲ ಆಗುತ್ತಿದೆ. ಈ ಯೋಜನೆಯನ್ನು ಮರು ಪ್ರಾರಂಭಿಸುವಂತೆ ಯು.ಟಿ ಖಾದರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

2018 ರಲ್ಲಿ ಯುಟಿ ಖಾದರ್ ಅವರು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವರಾಗಿದ್ದ ವೇಳೆ ಯುಟಿ ಖಾದರ್ ಅವರು, ‘ಕೇಂದ್ರ ಸರಕಾರವು ಗೋಹತ್ಯಾ ನಿಷೇಧ ಜಾರಿಗೊಳಿಸುವುದಾದರೆ ಕಾಂಗ್ರೆಸ್ ಪಕ್ಷವು ಬೆಂಬಲಿಸಲಿದೆ’ ಎಂದು ಹೇಳಿದ್ದರು.



Join Whatsapp