ಕಾರವಾರ: ಇಂದಿಗೂ ಅಲ್ಪಸಂಖ್ಯಾತರು ರಾಷ್ಟ್ರೀಯ ಮುಖ್ಯವಾಹಿನಿಗೆ ಬಂದಿಲ್ಲ. ಕಾಂಗ್ರೆಸ್‍ನ ತುಷ್ಟೀಕರಣದ ಫಲ ಇದು. ಮುಸ್ಲಿಮರು ಈಗಲೂ ಪಕ್ಷಪಾತೀಯವಾಗಿ ಮತ ಚಲಾಯಿಸುವುದನ್ನು ಮುಂದುವರಿಸಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಇನ್ನಾದರೂ ಬರಬೇಕು. ಅವರು ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಚರ್ಚಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಲೇ ಇದ್ದೇನೆ. ಕಾಂಗ್ರೆಸ್‌ನ ಅತಿಯಾದ ತುಷ್ಟೀಕರಣ, ಮತಬ್ಯಾಂಕ್ ರಾಜಕೀಯಕ್ಕೆ ಒಳಗಾಗಿ ಅವರು ಮುನ್ನೆಲೆಗೆ ಬರದಂತಾಗಿದ್ದರು. ಈ ಸಲವಾದರೂ ಅವರು ಮುನ್ನೆಲೆಗೆ ಬರುತ್ತಾರೆಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‍ನಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯವಿಲ್ಲ. ಅವರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುತ್ತದೆ ಎಂದು ತಿಳಿಸಿದರು.