ಕಲ್ಲಡ್ಕ: ಸ್ಕೂಟರ್‌ನಲ್ಲೇ ಸಂಚರಿಸಿ ಹೆದ್ದಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

Prasthutha|

ಕಲ್ಲಡ್ಕ: ಹದಗೆಟ್ಟಿರುವ ಕಲ್ಲಡ್ಕದ ರಾಷ್ಟ್ರೀಯ ಹೆದ್ದಾರಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಕೂಟರ್‌ನಲ್ಲೇ ಸಂಚರಿಸಿ ಪರಿಶೀಲಿಸಿದರು.

- Advertisement -

ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕದಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ಪ್ರಗತಿಪರಿಶೀಲನಾ ಸಭೆಯಲ್ಲಿ ಎನ್ಎಚ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ 2-3 ದಿನಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಬೇಕೆಂದು ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಖುದ್ದು ಸ್ಥಳಕ್ಕೆ ಹೋಗಿ ರಸ್ತೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸುತೇಶ್, ಕೆ.ಎನ್‌.ಆರ್.ಸಿ.ಕಂಪೆನಿಯ ಎ.ಜಿ.ಎಮ್ ರೋಹಿತ್ ರೆಡ್ಡಿ ಕಂದಾಯ ನಿರೀಕ್ಷಕ ಜನಾರ್ಧನ, ವಿಜಯ್ ಮತ್ತಿತರರು ಹಾಜರಿದ್ದರು.



Join Whatsapp