ಕೇರಳ ಚುನಾವಣೆ | ಮುಖ್ಯಮಂತ್ರಿ ಪಿಣರಾಯಿ ವಿರುದ್ಧ ವಲಯಾರ್ ಸಂತ್ರಸ್ಥೆಯರ ತಾಯಿ ಕಣಕ್ಕೆ!

Prasthutha|

ತ್ರಿಶೂರ್: 2017ರಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವಲಯಾರ್ ಬಾಲಕಿಯರ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ತನ್ನ ಪುತ್ರಿಯರಿಗೆ ನ್ಯಾಯ ಕೊಡದವರ ವಿರುದ್ಧ ತಾನು ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ.

- Advertisement -

ತ್ರಿಶೂರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ನಿರಾಕರಣೆ ಮತ್ತು ನಿಂಧನೆಗೊಳಗಾಗಿರುವ ಎಲ್ಲಾ ಮಕ್ಕಳ ಪೋಷಕರ ಪರವಾಗಿ ಮುಖ್ಯಮಂತ್ರಿ ವಿರುದ್ಧ ತಾನು ಸ್ಪರ್ಧಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

 ವಲಯಾರ್ ಹೋರಾಟ ಸಮಿತಿ ಪ್ರತಿನಿಧಿಯಾಗಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸಂಘ ಪರಿವಾರ ಹೊರತುಪಡಿಸಿ, ಇತರ ಯಾವುದೇ ಪಕ್ಷಗಳು ಬೆಂಬಲ ನೀಡಿದರೆ ತಾನು ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.

- Advertisement -

ನ್ಯಾಯ ದೊರಕಿಸಿ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ನ್ಯಾಯ ಕೊಡುವುದರ ಬದಲಾಗಿ ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗೆ ಬಡ್ತಿ ನೀಡಲಾಗಿದೆ. ನ್ಯಾಯ ಕೇಳಲು ಇದು ಸೂಕ್ತ ಸಮಯವಾಗಿದೆ ಎಂದು ಆ ಮಹಿಳೆ ಹೇಳಿದ್ದಾರೆ.

ಅಕ್ಟೋಬರ್ 2017ರಲ್ಲಿ 13 ಹಾಗೂ 9 ವರ್ಷದ ಇಬ್ಬರು ದಲಿತ ಬಾಲಕಿಯರು, ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೂ ಮುನ್ನಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಮರಣೋತ್ತರ ಪರೀಕ್ಷೆ ವೇಳೆಯಲ್ಲಿ ತಿಳಿದುಬಂದಿತ್ತು.



Join Whatsapp