“ದಯವಿಟ್ಟು ನಮ್ಮನ್ನು ಹೊರಗಟ್ಟಬೇಡಿ”: ಕೈಮುಗಿದು ಬೇಡಿಕೊಂಡ ಹರಿಜನ ಸರ್ಕಾರಿ ಶಾಲೆಯ ಮಕ್ಕಳು !

Prasthutha|

ಹರಿಜನ ಸರ್ಕಾರಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳನ್ನು ಹೊರಗಟ್ಟಿ ಶಾಲೆಗೆ ಬೀಗ ಜಡಿಯಲು ಅಧಿಕಾರಿಗಳು ಮುಂದಾದಾಗ ಶಾಲಾ ವಿದ್ಯಾರ್ಥಿಗಳು ಕಣ್ಣೀರಿಟ್ಟು , ಕೈ ಮುಗಿದುಕೊಂಡು “ನಮ್ಮನ್ನು ಹೊರಗಟ್ಟಬೇಡಿ ಸರ್ ಪ್ಲೀಸ್” ಎಂದು ಪೊಲೀಸರಲ್ಲಿ ಬೇಡಿಕೊಂಡ ಘಟನೆ ಹುಬ್ಬಳ್ಳಿಯ ರಾಮನಗರದಲ್ಲಿ ನಡೆದಿದೆ.

- Advertisement -

ಊರಿನ ಎರಡು ಬಣಗಳ ನಡುವೆ ನಡೆದ ಜಾಗದ ತಕರಾರಿನಲ್ಲಿ ನ್ಯಾಯಾಲಯದ ತೀರ್ಪು ಒಂದು ಪ್ರತ್ಯೇಕ ಬಣದ ಪರವಾಗಿದ್ದು, ಅವರು ಪೊಲೀಸರ ಮೂಲಕ ಸರ್ಕಾರಿ ಶಾಲೆಯನ್ನು ಖಾಲಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶಾಲಾ ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು ಎನ್ನಲಾಗಿದೆ. ಖಾಲಿ ಮಾಡಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ಅಳುತ್ತಾ, “ನಮಗೆ ಕಲಿಯಲು ಬಿಡಿ, ಶಾಲೆಯನ್ನು ಖಾಲಿ ಮಾಡಬೇಡಿ” ಎಂದು ಪರಿಪರಿಯಾಗಿ ವಿದ್ಯಾರ್ಥಿಗಳು ಬೇಡಿಕೊಂಡಿದ್ದಾರೆ.

ಈ ಘಟನೆ ಬಗ್ಗೆ ಮಾತಾಡಿದ ಮುಖ್ಯೋಪಾದ್ಯಾಯ ಹನುಮಂತಪ್ಪ “ ತೀರ್ಪು, ನ್ಯಾಯ ಎಲ್ಲವೂ ಯಾರ ಪರವಾಗಿಯೇ ಬಂದಿರಲಿ, ಆದರೆ ಎಪ್ರಿಲ್ ವರೆಗಾದರೂ ಮಕ್ಕಳಿಗೆ ಕಲಿಯಲು ಅವಕಾಶ ಮಾಡಿಕೊಡಿ. ಈ ಆತಂಕದಿಂದ ವಿದ್ಯಾರ್ಥಿಗಳು ಒಂದು ಗುಟುಕು ನೀರೂ ಕುಡಿಯಲಿಲ್ಲ “ ಎಂದು ಸುದ್ದಿಗಾರರೊಂದಿಗೆ ಅವರು ಹೇಳಿದ್ದಾರೆ



Join Whatsapp