ಕೊಲ್ಲಾಪುರ: ಕಾಂಗ್ರೆಸ್ ಜತೆ ಎನ್ ಸಿಪಿ ವಿಲೀನಗೊಳಿಸಲಾಗುತ್ತದೆ ಎಂಬ ಬಗ್ಗೆ ಎಂದೂ ಹೇಳಿಕೆ ನೀಡಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಸತಾರಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಎನ್ ಸಿಪಿಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿ, “ಮೀ ಅಸಾ ಬೊಲಾಲೋ ನಹಿ, ಮೀ ಅಸಾ ಬೊಲಾಲೋ ನಹಿ” ಎಂದು ಸ್ಪಷ್ಟಪಡಿಸಿದರು.
ಎನ್ ಸಿಪಿ ಹಾಗೂ ಕಾಂಗ್ರೆಸ್ 2001ರಿಂದೀಚೆಗೂ ಜತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸಚಿವ ಸಂಪುಟದಲ್ಲಿ ಕೂಡಾ ಜತೆಗಿದ್ದೆವು. ಜಂಟಿಯಾಗಿ ಚುನಾವಣೆಯನ್ನೂ ಎದುರಿಸಿದ್ದೆವು. ತತ್ವ ಸಿದ್ಧಾಂತ ಒಂದೇ ಆಗಿರುವುದರಿಂದ ಜತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದರು.