ಲಂಡನ್: ಬ್ರಿಟನ್‌ನ ಬರೋಬ್ಬರಿ 317 ಕಿಲೋ ತೂಕದ ವ್ಯಕ್ತಿ ಜೇಸನ್ ಹಾಲ್ಟನ್ ತಮ್ಮ 34 ನೇ ಹುಟ್ಟುಹಬ್ಬದ ಒಂದು ವಾರ ಮೊದಲು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
ಹಾಲ್ಟನ್ ಅವರ ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಒಂದು ವಾರದೊಳಗೆ ಹಾಲ್ಟನ್ ಸಾಯುತ್ತಾನೆ ಎಂದು ವೈದ್ಯರು ಹೇಳಿದ್ದರು.
ಹಾಲ್ಟನ್ ಒಂದು ದಿನಕ್ಕೆ 10,000 ಕ್ಯಾಲೊರಿಗಳನ್ನು ಹೊಂದಿರುವ ಆಹಾರ ಸೇವಿಸುತ್ತಿದ್ದರು. ಉಪಹಾರಕ್ಕಾಗಿ ಡೋನರ್ ಕಬಾಬ್‌ಗಳನ್ನು ತಿನ್ನುತ್ತಿದ್ದ ಅವರ ಆಹಾರದ ಖರ್ಚೇ ಒಂದು ವರ್ಷಕ್ಕೆ 10 ಸಾವಿರ ಡಾಲರ್ ಮೀರುತ್ತಿತ್ತು.
ಹಾಲ್ಟನ್ ವಿಶೇಷವಾಗಿ ಅಳವಡಿಸಿದ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರ ಬಳಕೆಗಾಗಿ ಗಟ್ಟಿಮುಟ್ಟಾದ ವಿಶೇಷ ಪೀಠೋಪಕರಣಗಳನ್ನು ನಿರ್ಮಾಣ ಮಾಡಲಾಗಿತ್ತು. ಅವರ ಜೀವನದ ಕೊನೆಯ ಭಾಗದಲ್ಲಿ ಹಾಸಿಗೆ ಹಿಡಿದಿದ್ದರು. ಅವರ ಬಳಿ ಅತ್ತಂದಿತ್ತ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಹಾಲ್ಟನ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
2020ರಲ್ಲಿ ಸಹ ಹಾಲ್ಟನ್ ಅನಾರೋಗ್ಯಕ್ಕೆ ಈಡಾಗಿ ಕುಸಿದುಬಿದ್ದಿದ್ದರು. ಅಂದು 30 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ತಂಡವು ಮೂರನೇ ಮಹಡಿಯ ಫ್ಲಾಟ್‌ನಿಂದ ಕ್ರೇನ್‌ನಿಂದ ಏರ್‌ಲಿಫ್ಟ್ ಮಾಡಬೇಕಾಗಿತ್ತು.