ಬಂಟ್ವಾಳ: ತಾಲ್ಲೂಕಿನ ನಾವೂರು ಎಂಬಲ್ಲಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ದುರಂತ ಇಂದು ಸಂಜೆ ನಡೆದಿದೆ.
ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಂ ನಾಶಿಯಾ (14 ) ಮೃತ ಬಾಲಕಿಯರು. ಬಾಲಕಿಯರು ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರೊಂದಿಗೆ ಸಂಜೆ ಮಕ್ಕಳು ಸ್ಥಳೀಯ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಪೋಷಕರು ಅಸಹಾಯಕರಾಗಿ ರೋದಿಸುತ್ತಾ ನಿಲ್ಲಬೇಕಾದ ಸನ್ನಿವೇಶ ನಡೆದಿತ್ತು ಎನ್ನಲಾಗಿದೆ.
ಮೂಲತಃ ನಾವೂರು ನಿವಾಸಿ ಆಗಿರುವ ಇಲ್ಯಾಸ್ ಉಳ್ಳಾಲದಲ್ಲಿ ವಾಸವಾಗಿದ್ದು, ಇಲ್ಲಿನ ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.