ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು, ಆದರೆ ಇವನು ಜನರ ಜೀವನದ ಜೊತೆ ನಟನೆ ಮಾಡ್ತಾನೆ: ಪ್ರಕಾಶ್ ರೈ

Prasthutha|

ರಾಯಚೂರು: ಅವನಿಗೆ ರೈತರ ಬಗ್ಗೆ ಗೊತ್ತಿಲ್ಲ, ಹಳ್ಳಿಗಳ ಬಗ್ಗೆ ಗೊತ್ತಿಲ್ಲ. ಹಳ್ಳಿಗಳನ್ನು ದತ್ತು ತಗೊಂಡು ಮಾಡೆಲ್ ಮಾಡ್ತೀವಿ ಅಂದರು.. ನಿಮ್ಮ ಜನ್ಮಕ್ಕೆ, ಕರ್ಮಕ್ಕೆ ಒಂದಾದರೂ ಹಳ್ಳಿ ಡೆವೆಲಪ್ ಮಾಡಿದ್ದೀರಾ? ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು. ಆದರೆ ಇವನು ಜನರ ಜೀವನದ ಜೊತೆ ನಟನೆ ಮಾಡ್ತಾನೆ ಎಂದು ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಚುನಾವಣೆ ಹಿನ್ನೆಲೆ ರಾಯಚೂರು ನಗರಕ್ಕೆ ಆಗಮಿಸಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ ರಾಜ್, ನೀನು ಕೊಟ್ಟ ಮಾತನ್ನು ನಾವು ನೆನಪು ಮಾಡಿದರೆ ಅದು ದೇಶ ದ್ರೋಹನಾ? 10 ಲಕ್ಷ ಎಕರೆ ಚೀನಾ ಒತ್ತುವರಿ ಮಾಡಿದೆ. ಇವನನ್ನು ನಾವು ಉಳಿಸಿಕೊಳ್ಳಬೇಕಾ? ಇವನೇ ಓದಿಲ್ಲ, ಅ ಆ ಇ‌ ಈ ಬರಲ್ಲ. ರೈತರ ಮಹತ್ವ ಹೇಗೆ ಗೊತ್ತಾಬೇಕು ಇವನಿಗೆ? ಹೂವಿನ ಹತ್ತಿರ ಹೋದರೆ ಪರಿಮಳ ಸುವಾಸನೆ ಬರುತ್ತೆ, ಇವನ ಹತ್ತಿರ ಹೋದರೆ ಗಬ್ಬು ನಾಥ ಬರುತ್ತೆ ಎಂದು ಪ್ರಖ್ಯಾತ ನಟ ಹೇಳಿದ್ದಾರೆ.

ದೇಶದ ಇವತ್ತಿನ ಸ್ಥಿತಿಗೆ ಈ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಸರ್ಕಾರಗಳು ಕಾರಣ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

- Advertisement -

ನಾವು ಕಾಯಕ ಕಲ್ಯಾಣ ಮಾಡ್ತಿವಿ ಆದ್ರೆ ಬಿಜೆಪಿಯವ್ರು ಕಾವಿ ಕಲ್ಯಾಣ ಮಾಡ್ತಿದ್ದಾರೆ. ಮಹಾಪ್ರಭುಗಳು ಇಲ್ಲೇ ಪ್ರಚಾರಕ್ಕೆ ಬಂದಿದ್ದಾರೆ ತಾಯಿ-ತಂದೆ ಮಗನಿಗೆ ಇರುವ ಸಂಬಂಧ ನನಗೆ ರೈತರಿಗೆ ಇದೆ. ಕಾಲ ಕಾಲದಿಂದ ರೈತರಿಗೆ ಕೊಡೋದು ಭಿಕ್ಷೆ ಅಂದುಕೊಂಡಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ರೈತರು ಘನತೆಯಿಂದ ಬಳಲುತ್ತಿದ್ದಾರೆ. ಆದರೆ ಆತ ರೈತನ ಮಗ‌ ಈಗ ರೈತನಾಗಲ್ಲ ಅಂತಿದಾನೆ. ಇಷ್ಟು ದೊಡ್ಡ ಭಾರತದಲ್ಲಿ ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನನಗೆ ಯಾರೂ ಇಲ್ಲ ಎಂಬ ಭಾವನೆ ರೈತರಿಗೆ ಬಂದು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ. ಇದೆಲ್ಲ ಆ ಮಹಾಪ್ರಭುಗಳಿಗೆ ಅರ್ಥಾಗುತ್ತಾ? ಮಹಾಪ್ರಭುವಿನ ಸರ್ಕಾರದಲ್ಲಿ ಏನೂ ಮಾಡೊಲ್ಲ. ಅವನಲ್ಲಿ ಪರಿಹಾರ ಇಲ್ಲ ಎಂದ ಪ್ರಕಾಶ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಪ್ರಕಾಶ ರಾಜ್, ಇದನ್ನು ನಾನು ಮಹಾಪ್ರಭುಗಳಿಗೆ ಕೇಳಬೇಕು ಅಂದುಕೊಂಡೆ. ನಿನ್ನ‌ ಜೊತೆ ಮೈತ್ರಿ ಮಾಡಿಕೊಂಡ ಅಣ್ಣಾ ಇದಾನಲ್ಲಾ‌‌.. ಆ ಅಣ್ಣ ಹೆಣ್ಣುಮಕ್ಕಳಿಗೆ ಉಚಿತ ಬಸ್ ಕೊಟ್ರೆ ದಾರಿ ತಪ್ಪಿದ್ದಾರೆ ಎಂದಿದ್ದ. ಆದರೆ ಆ ನಿನ್ನ ದಾರಿ ತಪ್ಪಿದ ಮಗ ಈಗ ಎಲ್ಲವನೇ ವಸಿ ಹೇಳಪ್ಪ ಎಂದು ಹೆಚ್ಡಿ ಕುಮಾರಸ್ವಾಮಿ ವಿರುದ್ಧವೂ ಪ್ರಕಾಶ್ ರಾಜ್ ಕಿಡಿಗಾರಿದ್ದಾರೆ.



Join Whatsapp