ಕಾಂಗ್ರೆಸ್ ವಿರುದ್ಧ FIR ದಾಖಲಿಸಿದ ನಟ ಅಮೀರ್ ಖಾನ್

Prasthutha|

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಾಲಿವುಡ್ ನಟ ಅಮೀರ್ ಖಾನ್ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -


ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅಮೀರ್ ಖಾನ್ ಮಾತನಾಡಿರುವಂತೆ ಕೃತಕ ಬುದ್ಧಿಮತ್ತೆ ಬಳಸಿ ಡೀಪ್ಫೇಕ್ ವಿಡಿಯೊ ಜನರೇಟ್ ಮಾಡಲಾಗಿದೆ.


ದೂರದರ್ಶನ ಕಾರ್ಯಕ್ರಮ ‘ಸತ್ಯಮೇವ ಜಯತೇ’ ಸಂಚಿಕೆಯನ್ನು ಒಳಗೊಂಡಂತೆ ವಿವಾದಿತ ಜಾಹೀರಾತಿನಲ್ಲಿ ಅಮೀರ್ ಖಾನ್ ದೃಶ್ಯವನ್ನು ಸೇರಿಸಲಾಗಿದೆ. ಬಿಜೆಪಿಯು ನಾಗರಿಕರ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ ಜಮೆ ಮಾಡುವ ಭರವಸೆಯನ್ನು ಅಮೀರ್ ಖಾನ್ ಟೀಕಿಸಿರುವಂತೆ ವಿಡಿಯೊವನ್ನು ತಯಾರಿಸಲಾಗಿದೆ. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ದೂರನಲ್ಲಿ ಮನವಿ ಮಾಡಲಾಗಿದೆ.

- Advertisement -



Join Whatsapp