ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಕುರಿತಾಗಿ ಕೆಲವು ಕಿಡಿಗೇಡಿಗಳು ಅವರು ಬಿಲ್ಲವರಲ್ಲ, ಎಸ್ಡಿಪಿಐ ಸದಸ್ಯರು ಎಂದೆಲ್ಲಾ ನಿಂದನಾರ್ಹವಾಗಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಖಂಡಿಸುತ್ತದೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ನಮ್ಮ ಸಮಾಜದ ಅಭ್ಯರ್ಥಿಯ ಕುರಿತಾಗಿ ಅಪಪ್ರಚಾರ ಮಾಡಿದವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ನಾವು ಸಿದ್ದರಾಗಿದ್ದೇವೆ. ನಮ್ಮ ಸಮಾಜದ ಸ್ವಾಭಿಮಾನವನ್ನು ಕೆಣಕಲು ಹೊರಟರೆ ತಕ್ಕ ಫಲವನ್ನು ಉಣ್ಣಬೇಕಾಗುತ್ತದೆ. ಕಿಡಿಗೇಡಿ ಕೃತ್ಯ ನಡೆಸುವವರಿಗೂ ಅವರನ್ನು ಬೆಂಬಲಿಸುವವರೆಗೂ ಒಳ್ಳೆಯ ಸದ್ಬುದ್ಧಿಯನ್ನು ಗೋಕರ್ಣನಾಥೇಶ್ವರ ದೇವರು ನಾರಾಯಣ ಗುರುಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.