ಈವರೆಗೆ ದೇಶಾದ್ಯಂತ 4,650 ಕೋಟಿ ರೂಪಾಯಿ ಮೌಲ್ಯದ ವಸ್ತು ವಶ: ಚು.ಆಯೋಗ

Prasthutha|

ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್​ ಹಾಗೂ ಉಚಿತ ಉಡುಗೊರೆ ಸೇರಿದಂತೆ 4,650 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಇಂದು ತಿಳಿಸಿದೆ.

- Advertisement -

ಇದು 75 ವರ್ಷಗಳ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವೆಂದು ಆಯೋಗ ಹೇಳಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 3475 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು. ನಗದು, ಮದ್ಯ, ಡ್ರಗ್ಸ್​, ಬೆಲೆಬಾಳುವ ಲೋಹಗಳು ಮತ್ತು ಹಲವಾರು ಇತರ ಉಚಿತಗಳನ್ನು ಒಳಗೊಂಡಂತೆ ಮತದಾರರನ್ನು ಸೆಳೆಯುವ ವಿವಿಧ ವಸ್ತುಗಳು ಆಯೋಗವು ವಶಪಡಿಸಿಕೊಂಡ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಡ್ರಗ್ಸ್​ ಮತ್ತು ಮಾದಕವಸ್ತುಗಳು ಶೇ. 45 ರಷ್ಟಿದೆ.

ಸಮಗ್ರ ಯೋಜನೆ, ಸ್ಕೇಲ್ ಅಪ್ ಸಹಯೋಗ ಮತ್ತು ಏಜೆನ್ಸಿಗಳಿಂದ ಏಕೀಕೃತ ತಡೆ ಕ್ರಮ, ನಾಗರಿಕರ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನದ ಸೂಕ್ತ ತೊಡಗಿಸಿಕೊಳ್ಳುವಿಕೆಯಿಂದ ಇಷ್ಟೊಂದು ಹಣವನ್ನು ಸೀಜ್​ ಮಾಡಲು ಸಾಧ್ಯವಾಯಿತು ಎಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp