ಕಿನ್ನಿಗೋಳಿ: ತರಬೇತಿ ಶಿಬಿರದಲ್ಲಿ ಶಾಂತಿನಗರ ಮದ್ರಸ ಉತ್ತಮ ಪ್ರದರ್ಶನ; ಅಭಿನಂದನಾ ಪತ್ರ ಹಸ್ತಾಂತರ

Prasthutha|

ಕಿನ್ನಿಗೋಳಿ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ಘಟಕ ವತಿಯಿಂದ ರಾಜ್ಯದ ಸಾವಿರಾರು ಮದ್ರಸಗಳ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಶಿಬಿರ ಇತ್ತೀಚೆಗೆ ನಡೆದಿತ್ತು. ಈ ಶಿಬಿರದಲ್ಲಿ ಅತ್ಯುತ್ತಮ‌ ಪ್ರದರ್ಶನ ನೀಡಿದ ಹತ್ತು ಮದ್ರಸಗಳ ಸಾಲಿನಲ್ಲಿ ಹಯಾತುಲ್ ಇಸ್ಲಾಂ ಮದ್ರಸ ಶಾಂತಿನಗರ ಆಯ್ಕೆಯಾಗಿದೆ.

- Advertisement -

ಈ ಕುರಿತ ಅಭಿನಂದನ ಪತ್ರವನ್ನು ಎಸ್.ಜೆ.ಎಂ. ಕರ್ನಾಟಕವು ಮದ್ರಸಕ್ಕೆ ಹಸ್ತಾಂತರ ಮಾಡಿತ್ತು. ಈ ಅಭಿನಂದನ ಪತ್ರವನ್ನು ಖಿಲ್ರಿಯಾ ಜುಮ್ಮಾ ಮಸೀದಿ ಖತೀಬರು ಉಮರುಲ್ ಫಾರೂಕ್ ಸಖಾಫಿ ಅವರು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎ.ಬಿ. ಅಬೂಬಕ್ಕರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕೆಜೆಎಂ ಉಪಾಧ್ಯಕ್ಷ ಸೈದಾಲಿ, ಜೆಹೆಚ್ ಅಬ್ದುಲ್ ಜಲೀಲ್, ಇಕ್ಬಾಲ್, ನವಾಝ್ ಕಲ್ಕರೆ, ಅನೀಸ್ ಗುತ್ತಕಾಡು, ಸುಹೈಲ್ ಸಖಾಫಿ ಉಪಸ್ಥಿತರಿದ್ದರು.



Join Whatsapp