ಕಲಬುರಗಿ: ಬ್ಯಾಂಕ್ ನೋಟಿಸ್’ಗೆ ಹೆದರಿ ರೈತ ಆತ್ಮಹತ್ಯೆ

Prasthutha|

ಕಲಬುರಗಿ: ಬ್ಯಾಂಕ್ ನೋಟಿಸ್ ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೊತಂಗಲ ಗ್ರಾಮದಲ್ಲಿ ನಿನ್ನೆ(ಸೆ.26) ನಡೆದಿದೆ.

- Advertisement -


ಪಾಂಡಪ್ಪ ತಿಪ್ಪಣ್ಣ ಕೊರುವನ್ (45) ಆತ್ಮಹತ್ಯೆ ಮಾಡಿಕೊಂಡ ರೈತ.


ಮೃತ ವ್ಯಕ್ತಿ ತೊಗರಿ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂ.ಸಾಲ ಮಾಡಿದ್ದ. ಆದರೆ, ದುರಾದೃಷ್ಟವಶಾತ್ ನಿರಂತರವಾಗಿ ಸುರಿದ ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ನಾಶವಾಗಿತ್ತು.

- Advertisement -

ಇತ್ತ ಬ್ಯಾಂಕ್ ಅಧಿಕಾರಿಗಳ ಸಾಲದ ಕಿರುಕುಳಕ್ಕೆ ಹೆದರಿ ತಿಪ್ಪಣ್ಣ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



Join Whatsapp