ಕಲಬುರಗಿ: ಇಲ್ಲಿ ಧಾರಾಕಾರ ಮಳೆಯಾದ ಮಾಹಿತಿ ದೊರಕಿದೆ: ಸಂಜೆ ಸತತ ಒಂದು ಗಂಟೆಗಳ ಕಾಲ ಕಲ್ಬುರ್ಗಿ ನಗರದಲ್ಲಿ ಗುಡುಗು ಸಹಿತ ಮಳೆ ಆಗುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನಲ್ಲಿ ಮಧ್ಯಾಹ್ನ ಭರ್ಜರಿ ಮಳೆ ಸುರಿದಿದೆ. ಬಾಳೆಹೊನ್ನೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ವರದಿ ದೊರೆತಿದೆ. ಆವುತಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ.
ಹಂಗರವಳ್ಳಿ, ಕೆರೆಮಕ್ಕಿ, ಬೈಗೂರು ಗ್ರಾಮದಲ್ಲಿ ಮಳೆ ಸುರಿದಿದೆ. ಈ ಭಾಗದಲ್ಲಿ ವರ್ಷದ ಮೊದಲ ಮಳೆ ಇದಾಗಿದ್ದು, ಕೃಷಿಕರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸದ ವಾತಾವರಣ ಕಂಡು ಬಂದಿದೆ.
ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದಿತ್ತು ಎಂದು ತಿಳಿದು ಬಂದಿದೆ. ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಿಂದ ಕೆಲಕಾಲ ಜನಜೀವನ ಕೂಡ ಅಸ್ತವ್ಯಸ್ಥಗೊಂಡಿತ್ತು.
ಒಟ್ಟಿನಲ್ಲಿ ಬೇಸಿಗೆ ತಾಪ ಹಾಗೂ ಬರದಿಂದ ಕಂಗೆಟ್ಟ ರಾಜ್ಯಕ್ಕೆ ಕೊಂಚ ಮಳೆಯಾಗುತ್ತಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.