1.04 ಲಕ್ಷ ಕೋಟಿ ರೂ. ವಂಚನೆ: ವಿಯೆಟ್ನಾಂನ ಖ್ಯಾತ ಮಹಿಳಾ ಉದ್ಯಮಿಗೆ ಗಲ್ಲು

Prasthutha|

ವಿಯೆಟ್ನಾಂ: ಇಲ್ಲಿಮ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಲಿಯನೇರ್ ಟ್ರೂಂಗ್ ಮೈ ಲ್ಯಾನ್‌ಗೆ ಮರಣದಂಡನೆ ವಿಧಿಸಲಾಗಿದೆ. ದೇಶದ ಅತಿದೊಡ್ಡ ಹಣಕಾಸು ವಂಚನೆ ಪ್ರಕರಣದಲ್ಲಿ 67 ವರ್ಷದ ಟ್ರೂಂಗ್ ಮೈಲ್ಯಾನ್ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಹೋ ಚಿ ಮಿನ್ಹ್ ನಗರದ ನ್ಯಾಯಾಲಯ ಗುರುವಾರ ಆಕೆಗೆ ಮರಣದಂಡನೆ ವಿಧಿಸಿದೆ.

- Advertisement -

ವಿಯೇಟ್ನಾಂ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಹಣಕಾಸು ವಂಚನೆ ಪ್ರಕರಣ ಇದಾಗಿದ್ದು, 12.5 ಶತಕೋಟಿ ಡಾಲರ್‌ (1.04 ಲಕ್ಷ ಕೋಟಿ ರೂ.) ವಂಚನೆ ನಡೆದಿದೆ ಎನ್ನಲಾಗಿದೆ.

ವಾನ್ ಥಿನ್ ಫಾಟ್ ಹೋಲ್ಡಿಂಗ್ಸ್ ಗ್ರೂಪ್’ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಅಧ್ಯಕ್ಷರಾಗಿರುವ ಟ್ರೂಂಗ್ ಮೈಲ್ಯಾನ್ ತಮ್ಮ ನಿಯಂತ್ರಣದಲ್ಲಿರುವ ‘ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್’ನಲ್ಲಿ ಭಾರೀ ವಂಚನೆ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

- Advertisement -

ಮೈಲ್ಯಾನ್‌ ವ್ಯಾನ್‌ ಥಿನ್ಹ್‌ ಫಾಟ್‌ ಸಂಸ್ಥೆಯನ್ನು ಕಟ್ಟಿ ದೊಡ್ಡ ಸಾಮ್ರಾಜ್ಯದ ರಾಣಿ ಎನಿಸಿದ್ದರು. ಟ್ರೂಂಗ್ ಮೈ ಲ್ಯಾನ್ 2012ರಿಂದ 2022ರವರೆಗೆ ವಿಯೇಟ್ನಾಂನ ಸೈಗೋನ್‌ ಜಾಯಿಂಟ್‌ ಸ್ಟಾಕ್‌ ಕಮರ್ಷಿಯಲ್‌ ಬ್ಯಾಂಕ್‌ನ ಷೇರುಗಳ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದ್ದರು. ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಬ್ಯಾಂಕ್‌ನ ಹಣವನ್ನು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿಸಿದ್ದರು. ಆಕೆಗೆ ಸಂಬಂಧಿಸಿದ ಒಂದು ಸಾವಿರಕ್ಕೂ ಅಧಿಕ ಆಸ್ತಿಗಳನ್ನು ಸರ್ಕಾರ ಈಗಾಗಲೇ ಜಪ್ತಿ ಮಾಡಿದೆ.

Join Whatsapp