ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಮುಂದೆ ಚುನಾವಣೆಯೇ ನಡೆಯುವುದಿಲ್ಲ: ಸಚಿವೆ ನಿರ್ಮಲಾ ಸೀತಾರಾಮನ್ ಪತಿ

Prasthutha|

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದರೆ ಅಥವಾ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆದರೆ ದೇಶದಲ್ಲಿ ಮತ್ತೆ ಎಂದಿಗೂ ಚುನಾವಣೆಯೇ ನಡೆಯುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ರಾಜಕೀಯ ಅರ್ಥಶಾಸ್ತ್ರಜ್ಞರೂ‌ ಆದ ಪರಕಾಲ ಪ್ರಭಾಕರ್ ಹೇಳಿದ್ದಾರೆ.

- Advertisement -

ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ದ್ವೇಷದ ಭಾಷಣ ಮಾಡುತ್ತಾರೆ. ಇಡೀ ದೇಶದಲ್ಲಿ ಲಡಾಖ್-ಮಣಿಪುರದಂತಹ ಪರಿಸ್ಥಿತಿ ಉದ್ಭವಿಸುವಂತೆ ಮಾಡುತ್ತಾರೆ ಎಂದು ಡಾ. ಪ್ರಭಾಕರ್ ಅವರು ಹೇಳಿಕೆ ನೀಡಿರುವ ವೀಡಿಯೋವನ್ನು ಕಾಂಗ್ರೆಸ್‌ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ನರೇಂದ್ರ ಮೋದಿ ಮತ್ತು ಅವರ ಕ್ಯಾಬಿನೆಟ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನ ಮತ್ತು ನಕ್ಷೆಯೇ ಬದಲಾಗುತ್ತದೆ. ಮತ್ತೆ ನೀವು ಹಿಂದಿನ ಭಾರತವನ್ನು ಗುರುತಿಸಲು ಕೂಡಾ ಸಾಧ್ಯವಾಗುವುದಿಲ್ಲ ಎಂದು ಮೋದಿ ಸಂಪುಟದ ವಿತ್ತ ಸಚಿವೆಯ ಪತಿ ಹೇಳಿದ್ದಾರೆ.



Join Whatsapp