ದೇವರ ಫೋಟೊ ತೊಳೆಯಲು ಕಾವೇರಿ ನದಿಗೆ ಇಳಿದ ಯುವಕರಿಬ್ಬರು ಮೃತ

Prasthutha|

ಮೈಸೂರು: ಯುಗಾದಿ ಹಬ್ಬ ಹಿನ್ನೆಲೆ ದೇವರ ಫೋಟೊ ತೊಳೆಯಲು ಯುವಕರಿಬ್ಬರು ಕಾವೇರಿ ನದಿಗೆ ಇಳಿದಿದ್ದು, ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

- Advertisement -

ರವಿ ಎಂಬುವವರ ಪುತ್ರ ಗಗನ(18), ಸುರೇಶ್ ಎಂಬುವವರ ಪುತ್ರ ದರ್ಶನ್(20) ಮೃತರು.

ಘಟನೆ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಸ್ಥಳೀಯರು, ಸ್ಥಳಕ್ಕೆ ಸಿಬ್ಬಂದಿ ಓರ್ವನ ಶವ ಹೊರತೆಗೆದಿದ್ದಾರೆ. ಇನ್ನೋರ್ವನ ಮೃತದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿರುವ ಸಿಬ್ಬಂದಿ. ಘಟನೆಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp