ದಾವಣಗೆರೆ: ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀ ನೇತೃತ್ವದಲ್ಲಿ ನಡೆದ ಬಂಡಾಯ ಶಮನ ಯತ್ನ ವಿಫಲವಾಗಿದೆ. ಜಿ.ಬಿ.ವಿನಯ್ ಕುಮಾರ್ ಸಭೆ ನಡೆಸಿ ತಾವು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದಾರೆ.
ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಬಂಡಾಯ ಶಮನಗೊಳಿಸುವ ಪ್ರಯತ್ನ ನಡೆದಿದೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಗೌರವ ಕೊಟ್ಟು ನಾನು ಹೋಗಿ ಕೂತು ಮಾತನಾಡಿದ್ದೇನೆ. ಈ ವೇಳೆ ನಾನು ಗಟ್ಟಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಮೂಲೆಮೂಲೆಗಳಿಂದ ಜನ ಬರುತ್ತಿದ್ದಾರೆ. ನಾನು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿಲ್ಲ. ಮತದಾರರು ಇದ್ದರೆ ಪ್ರಜಾಪ್ರಭುತ್ವ. ಅವರ ಮಾತಿಗೆ ಮನ್ನಣೆ ಕೊಡಬೇೆಕೆಂದು ಪಕ್ಷೇತರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇನೆ ಎಂದರು.
ಸಿಎಂ ಸಿದ್ದರಾಮಯ್ಯನವರು ಕರೆಸಿ ಭೇಟಿ ಮಾಡಿ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ನೀನು ಪಕ್ಷೇತರ ನಿಲ್ಲುವುದು ಕಷ್ಟ ಆಗುತ್ತದೆ, ಯೋಚನೆ ಮಾಡು ಎಂದಿದ್ದಾರೆ.