ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ ಆಯಪ್‌ನ ಮಾತೃಸಂಸ್ಥೆ ‘ಮೆಟಾ’ ಭಾರತದ ಮೊದಲ ಡೇಟಾ ಸೆಂಟರ್‌ನ್ನು ಚೆನ್ನೈಯಲ್ಲಿ ಸ್ಥಾಪಿಸಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕ್ಯಾಂಪಸ್‌ನ 10 ಎಕ್ರೆ ಪ್ರದೇಶದಲ್ಲಿ ಡೆಟಾ ಸೆಂಟರ್ ಆರಂಭಗೊಳ್ಳಲಿದೆ.
ಮೆಟಾ ಭಾರತಕ್ಕೆ ಸಂಬಂಧಿಸಿದ ಕಂಟೆಂಟ್‌ಗಳು ಮತ್ತು ಇತರ ವಿಚಾರಗಳ ಬಗ್ಗೆ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಲು ಇಲ್ಲಿಯೇ ಡೆಡಾ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿ ಅದಕ್ಕಾಗಿ ಬಹುತೇಕ ಸಿದ್ಧತೆ ಮುಗಿದಿದೆ. ಇದರಿಂದಾಗಿ ಮೆಟಾಗೆ ಸ್ಥಳೀಯ ಭಾಷೆಗಳಲ್ಲಿ ನೀಡಲಾಗುವ ಜಾಹೀರಾತುಗಳಿಗೂ ಅನುಕೂಲವಾಗಲಿದೆ.
ಭಾರತಕ್ಕೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಸದ್ಯ ಸಿಂಗಾಪುರದಿಂದ ಪರಿಷ್ಕರಿಸಿ ಅಪ್‌ಡೇಟ್ ಮಾಡಲಾಗುತ್ತದೆ.
ಈ ಬಗ್ಗೆ ಕಳೆದ ತಿಂಗಳು ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜತೆಗೆ ಒಪ್ಪಂದಕ್ಕೆ ಮೆಟಾ ಸಹಿ ಹಾಕಲಾಗಿತ್ತು ಎನ್ನಲಾಗಿದೆ.