RCB vs LSG: ಮತ್ತೆ ತವರಲ್ಲಿ ಮುಗ್ಗರಿಸಿದ ಬೆಂಗಳೂರು

Prasthutha|

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಲಕ್ನೋ ಸೂಪರ್​ ಜೈಂಟ್ಸ್​ (RCB vs LSG) ತಂಡಗಳ ನಡುವಿನ ಸೆಣಸಾಟದಲ್ಲಿ ಕೆಎಲ್ ರಾಹುಲ್​ ತಂಡ ಗೆಲುವು ತನ್ನದಾಗಿಸಿದೆ.

- Advertisement -

ಈ ಮೂಲಕ ಸತತ 2ನೇ ಗೆಲುವನ್ನು ಲಕ್ನೋ ಸೂಪರ್ ಜೈಂಟ್ಸ್ ಕಂಡಿದೆ. ಇದೇ ಸಮಯದಲ್ಲಿ ಸತತ ಮೂರನೇ 2ನೇ ಸೋಲಿನ‌ ಕಹಿಯನ್ನು ಆರ್​ಸಿಬಿ ಪಡೆ ಅನುಭವಿಸಿದೆ.

ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಕಾರಣ ಬ್ಯಾಟಿಂಗ್​ ಆರಂಭಿಸಿದ ಲಕ್ನೋ ಭರ್ಜರಿ ಪ್ರದರ್ಶನ ನೀಡಿತು. ಅಂತಿಮವಾಗಿ ಎಲ್​ಎಸ್​​ಜಿ 20 ಓವರ್​ಗೆ 5 ವಿಕೆಟ್ ನಷ್ಟಕ್ಕೆ 181 ರನ್​ ಸಿಡಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡವು 19.4 ಓವರ್​ಗೆ 153 ರನ್​ ಗಳಿಗೆ ಆಲೌಟ್ ಆಯಿತು.

- Advertisement -

ಲಕ್ನೋದ ಯುವ ಬೌಲರ್ ಮಯಾಂಕ್ ಯಾದವ್ ಬೌಲಿಂಗ್‌ಗೆ ರನ್ ಗಳಿಸಲು ಪರದಾಡಿದ ಆರ್‌ಸಿಬಿಯ ಪ್ರಮುಖ ಮೂವರು ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದರು. ಮಯಾಂಕ್ ಯಾದವ್ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಆರ್‌ಸಿಬಿ 28 ರನ್​ ಗಳಿಂದ ಸೋಲನ್ನಪ್ಪಿದೆ.

Join Whatsapp