ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಹಾಲಿ ಸಂಸದ ಡಿಕೆ ಸುರೇಶ್ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಭೇಟಿ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ಡಿಕೆ ಸುರೇಶ್, ಇಂದು ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ದಂಪತಿಗಳ ಆಶೀರ್ವಾದ ಪಡೆದೆ. ಈ ವೇಳೆ ಅವರ ಸುದೀರ್ಘವಾದ ರಾಜಕೀಯ ಅನುಭವ ಮತ್ತು ಹಂಚಿಕೊಂಡ ಸಲಹೆಗಳು ಮತ್ತಷ್ಟು ನನಗೆ ಸ್ಫೂರ್ತಿಯನ್ನು ನೀಡಿವೆ ಎಂದಿದ್ದಾರೆ.