ಶಾಸಕರ ಬಂಧನ ಸಾಧ್ಯತೆ । ಭದ್ರಾವತಿಯಲ್ಲಿ ಇಂದು 144ಸೆಕ್ಷನ್ ಜಾರಿ

Prasthutha|

- Advertisement -

ಶಿವಮೊಗ್ಗ: ಕ್ಷೇತ್ರದ ಶಾಸಕ ಬಿ. ಕೆ. ಸಂಗಮೇಶ್ವರ್ ಬಂಧನದ ಕುರಿತಾಗಿ ವದಂತಿ ಹರಡುತ್ತಿದ್ದು, ಇಂದಿನಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಇಂದಿನಿಂದ ಮಾರ್ಚ್ 5ರ ಮಧ್ಯರಾತ್ರಿ 12 ಗಂಟೆಯ ವರೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕನಕ ಮಂಟಪದಲ್ಲಿ ಇತ್ತೀಚೆಗೆ ನಡೆದ ಕಬ್ಬಡ್ಡಿ ಪಂದ್ಯಾಟದ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಾರಾಮಾರಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ಪ್ರತಿದೂರುಗಳು ದಾಖಲಾಗಿದ್ದು, ಪೊಲೀಸರು ಐದು ಎಫ್ ಐಆರ್ ಗಳನ್ನು ದಾಖಲು ಮಾಡಿದ್ದಾರೆ. ಅದರೊಂದಿಗೆ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧವೂ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಸಾಮಾಜಿಕ ವಲಯಗಳಲ್ಲಿ ಶಾಸಕರ ಬಂಧನ ವದಂತಿ ಹಬ್ಬತೊಡಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೆ.ಸಂಗಮೇಶ್ವರ್, “ ನನ್ನನ್ನು ಯಾಕೆ ಪೊಲೀಸರು ಬಂಧಿಸುತ್ತಾರೆ, ನಾನು ಬೆಂಗಳೂರಿನ ಶಾಸಕರ ಭವನದಲ್ಲಿದ್ದೇನೆ “ ಎಂದು ವೀಡಿಯೋ ಸಂದೇಶ ರವಾನೆ ಮಾಡಿದ್ದಾರೆ.

- Advertisement -

ಆದರೂ ಇಂದಿನಿಂದ ಮಾರ್ಚ್ 5ರ ವರೆಗೆ ಭದ್ರಾವತಿಯಲ್ಲಿ ನಿಷೇದಾಜ್ಞೆ ಜಾರಿಯಾಗಿದೆ. ಪಟ್ಟಣದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ನಡೆಸುವುದು, ಸಭೆ ಮಾಡುವುದು, ಮಾರಕಾಸ್ತ್ರ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ. ಪ್ರತಿಕೃತಿ ದಹನ, ಬಹಿರಂಗ ಘೋಷಣೆ ಕೂಗದಂತೆ ಸೂಚನೆ ನೀಡಲಾಗಿದೆ.



Join Whatsapp