ಬೆಂಗಳೂರು: ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಿಂದ ವಿನೋದ್ ಅಸೂಟಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿದ ರಜತ್ ಉಳ್ಳಾಗಡ್ಡಿಮಠ, ಈ ಬಾರಿ ನಾನು ಎಂಟ್ರೆನ್ಸ್ ಎಕ್ಸಾಮ್ ಫೇಲ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಎಂಟು ತಿಂಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೆ. ಎಲ್ಲಾ ಸರ್ವೆಯಲ್ಲೂ ನನ್ನ ಹೆಸರು ಮುನ್ನಡೆಯಲ್ಲಿತ್ತು. ಆದ್ರೆ ಇದೀಗ ಟಿಕೆಟ್ ಬೇರೆಯವರಿಗೆ ಘೋಷಣೆ ಆಗಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಯೋಗ್ಯತೆ ಇದ್ದರೂ ಯೋಗ ಇರುವುದಿಲ್ಲ. ಸ್ಪರ್ಧಿಸಲು ಅವಕಾಶದ ನಿರೀಕ್ಷೆಯಲ್ಲಿದ್ದೆ. ಆದರೆ ಅದೃಷ್ಟ ನನ್ನ ಕೈಹಿಡಿಯಲಿಲ್ಲ ಅಂತ ಬೇಸರ ಹೊರಹಾಕಿದ್ದರು.