ಬ್ರಿಟನ್: ಖಾಲಿಸ್ತಾನ್ ಹೋರಾಟಗಾರನಿಗೆ 28 ತಿಂಗಳ ಜೈಲುಶಿಕ್ಷೆ

Prasthutha|

ಲಂಡನ್: 26 ವರ್ಷದ ಖಾಲಿಸ್ತಾನ್ ಹೋರಾಟಗಾರ ಗುರ್ಪ್ರೀತ್ ಸಿಂಗ್ಗೆ 28 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಇಬ್ಬರು ಭಾರತೀಯ ಮೂಲದವರಿಗೆ ಹಾಗೂ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಈ ಶಿಕ್ಷೆ ನೀಡಲಾಗಿದೆ.

- Advertisement -

ಪಶ್ಚಿಮ ಲಂಡನ್‌ನಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗುರುಪ್ರೀತ್ ಸಿಂಗ್ ಅಡ್ಡಿಪಡಿಸಿದ್ದಲ್ಲದೆ, ತನ್ನಲ್ಲಿದ್ದ ಕಿರ್ಪಾನ್ (ಸಿಖ್ಖರ ಧಾರ್ಮಿಕ ಸಮವಸ್ತ್ರದ ಭಾಗವಾದ ಸಣ್ಣ ಚೂರಿ)ನಿಂದ ಲಂಡನ್ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಇರಿದಿದ್ದನು.



Join Whatsapp