ಕೇರಳ: ಮೋದಿ ರೋಡ್ ಶೋನಲ್ಲಿ ಮುಸ್ಲಿಂ ಅಭ್ಯರ್ಥಿಯ ಕಡೆಗಣನೆ

Prasthutha|

ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್ ಶೊನಲ್ಲಿ ರಾಜ್ಯದ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಡೆಗಣಿಸಿದ್ದು ರಾಜಕೀಯ ಜಗಳಕ್ಕೆ ಕಾರಣವಾಗಿದೆ.

- Advertisement -

ಪಾಲಕ್ಕಾಡ್ನಲ್ಲಿ ಮಂಗಳವಾರ ನರೇಂದ್ರ ಮೋದಿಯವರು ನಡೆಸಿದ ರೋಡ್ ಶೋ ವಾಹನದಲ್ಲಿ, ಪಾಲಕ್ಕಾಡ್ ಹಾಗೂ ಪಕ್ಕದ ಪೊನ್ನಾನಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಇದ್ದರು. ಆದರೆ ಮಲಪ್ಪುರದ ಬಿಜೆಪಿ ಅಭ್ಯರ್ಥಿ ಅಬ್ದುಲ್ ಸಲಾಮ್ ಅವರು ಇರಲಿಲ್ಲ. ಈ ಬಗ್ಗೆ ಸಿಪಿಎಂ ಹಿರಿಯ ನಾಯಕ ಎ.ಕೆ ಬಾಲನ್ ಹೇಳಿಕೆ ನೀಡಿದ್ದು, ‘ಮೋದಿಯವರ ರೋಡ್ ಶೋನಲ್ಲಿ ಅಬ್ದುಲ್ ಸಲಾಮ್ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಗೆ ಇರುವ ಧೋರಣೆಯ ಪ್ರತಿಬಿಂಬ’ ಎಂದು ಹೇಳಿದ್ದಾರೆ.



Join Whatsapp