ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ: ಅಲೋಕ್ ಕುಮಾರ್

Prasthutha|

ಬೆಂಗಳೂರು: ಬೈಕ್ ಚಾಲನೆ ವೇಳೆ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಬುಧವಾರ ಸಂಚಾರ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

- Advertisement -


ರಾಜ್ಯದ ವಿವಿಧ ಘಟಕಗಳಲ್ಲಿ ಅಪಘಾತ ಘಟನೆಗಳು ವರದಿಯಾಗುತ್ತಿವೆ. ಅದರಲ್ಲಿಯೂ ಹೆಲ್ಮೆಟ್ ಇಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಕೆಲವರಿಗೆ ಗಾಯಗಳಾದರೆ ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಮತ್ತೆ ಈ ರೀತಿಯ ಅಪಘಾತಗಳು ಮರು ಕಳುಹಿಸದಂತೆ ಕ್ರಮಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ಹೆಲ್ಮೆಟ್ ಆದೇಶ ಹೊರಡಿಸಲಾಗಿದೆ.



Join Whatsapp