ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರಂಥ ದಮನಕಾರಿಗಳನ್ನು ಕಿತ್ತೂಗೆಯಲು ಕ್ರಮ ಕೈಗೊಳ್ಳಿ ಎಂದು ಭಾರತದ ಸ್ಟಾರ್ ಕುಸ್ತಿಪಟುಗಳಾದ ವಿನೇಶ್ ಫೊಗಾಟ್ ಮತ್ತು ಸಾಕ್ಷಿ ಮಲಿಕ್ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.
ಭಾರತೀಯ ಒಲಿಂಪಿಕ್ ಸಂಸ್ಥೆ ಕುಸ್ತಿಯ ನಿಯಂತ್ರಣವನ್ನು ಮತ್ತೆ ವಿವಾದಿತ ಭಾರತೀಯ ಕುಸ್ತಿ ಪ್ರಾಧಿಕಾರಕ್ಕೆ ನೀಡಿದೆ. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿನೇಶ್ ಮತ್ತು ಸಾಕ್ಷಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೋದಿಯವರನ್ನು ಆಗ್ರಹಿಸಿದ್ದಾರೆ.
ವಿನೇಶ್ ಪೊಗಾಟ್ ಮತ್ತು ಸಾಕ್ಷಿ ಮಲಿಕ್, ಪ್ರಧಾನಿ ಒಬ್ಬರು ಸ್ಪಿನ್ ಮಾಸ್ಟರ್. ತನ್ನ ಎದುರಾಳಿಗಳಿಗೆ ತಿರುಗೇಟು ನೀಡುವಾಗ ನಾರಿ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನರೇಂದ್ರ ಮೋದಿಜಿ, ನಿಜವಾದ ನಾರಿ ಶಕ್ತಿ ಬಗ್ಗೆ ನಮಗೆ ತಿಳಿಸಿಕೊಡಿ ಎಂದು Xನಲ್ಲಿ ಪೋಸ್ಟ್ ಮಾಡಿದ್ದಾರೆ.