ಸೀರೆಗಳು ತುಂಬಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು

Prasthutha|

ರಾಮನಗರ: ನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿರುವ ಒಕ್ಕಲಿಗರ ಭವನದಲ್ಲಿರುವ ಖಾಸಗಿ ಗೋದಾಮಿನಲ್ಲಿ ಸೀರೆಗಳು ತುಂಬಿದ್ದ ವಾಹನವನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ರಾತ್ರಿ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

- Advertisement -

ಇದು ಕಾಂಗ್ರೆಸ್‌ನವರು ಮತದಾರರಿಗೆ ಹಂಚುವುದಕ್ಕಾಗಿ ವಾಹನದಲ್ಲಿ ಸಂಗ್ರಹಿಸಿ ಇಟ್ಟ ಸೀರೆಗಳು ಎಂದು ಉಭಯ ಪಕ್ಷಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿದ್ದಾರೆ.

ಸ್ಥಳಕ್ಕೆ ಬಂದ ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಪುರ ಠಾಣೆ ಪಿಎಸ್ ಐ ಆಕಾಶ್ ಸೇರಿದಂತೆ ಸ್ಥಳೀಯ ಚುನಾವಣಾ ಸಿಬ್ಬಂದಿ ಗೋದಾಮು ಸಿಬ್ಬಂದಿಯಿಂದ ಸೀರೆಗಳನ್ನು ತಂದಿರುವುದಕ್ಕೆ ಸಂಬಂಧಿಸಿದ ರಸೀತಿ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.



Join Whatsapp