ಟಿಕೆಟ್ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ
ಬೆಂಗಳೂರು: ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ. ಇದೇ ನನ್ನ ಬೆಂಬಲಿಗರ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಎಂದು ಆ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹಿಂದೆ ಹೇಳಿದ್ದೆ ನಿಜ. ಆದರೆ ಆ ಸಂದರ್ಭವೇ ಬೇರೆ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿದರು.
ಕ್ಷೇತ್ರದ ಎಲ್ಲ ಶಾಸಕರು ಮತ್ತು ಮುಖಂಡರು ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆಮ ಆ ಕಾರಣದಿಂದ ಟಿಕೆಟ್ ಬಯಸಿದ್ದೇನೆ ಎಂದರು.
ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಬಿ.ಎಸ್. ಯಡಿಯೂರಪ್ಪ ಅವರ ನಂತರದಲ್ಲಿ ನನಗೆ ಹೆಚ್ಚು ಅವಕಾಶಗಳನ್ನು ನೀಡಿದೆ ಎಂದು ಸದಾನಂದ ಗೌಡ ಪುನರುಚ್ಛರಿಸಿದರು.
ಆದರೆ, ಈಗ ಟಿಕೆಟ್ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ ಎಂದು ಸದಾನಂದ ಗೌಡ ಹೇಳಿದ್ದು, ಟಿಕೆಟ್‌ಗಾಗಿ ಎಲ್ಲಾ ಯತ್ನ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.