ಮಧ್ಯಪ್ರದೇಶ: ಕಾಂಗ್ರೆಸ್ ನಾಯಕ ಪಚೌರಿ, ರಾಜುಖೇಡಿ ಬಿಜೆಪಿ ಸೇರ್ಪಡೆ

Prasthutha|

ಭೋಪಾಲ್: ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಮತ್ತು ಮಾಜಿ ಸಂಸದ ಗಜೇಂದ್ರ ಸಿಂಗ್ ರಾಜುಖೇಡಿ ಅವರು ಇಂದು(ಶನಿವಾರ) ಬಿಜೆಪಿ ಸೇರ್ಪಡೆಯಾಗಿದ್ದಾರೆ.

- Advertisement -

ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಪಚೌರಿ ಅವರು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಕೇಂದ್ರ ರಕ್ಷಣಾ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಬುಡಕಟ್ಟು ಸಮುದಾಯದ ಪ್ರಮುಖ ನಾಯಕರಾದ ರಾಜುಖೇಡಿ ಅವರು ಧಾರ್ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.


ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಸುರೇಶ್ ಪಚೌರಿ, ‘ನಾನು ರಾಜಕೀಯಕ್ಕೆ ಬಂದಾಗ ಸಮಾಜ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೆ. ಆಗ ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಕಾಂಗ್ರೆಸ್ ಬಯಸಿತ್ತು. ಆದರೆ ಇಂದು ಅದರ ನಿಲುವು ಬದಲಾಗಿದೆ. ತನ್ನ ತತ್ವ–ಸಿದ್ದಾಂತಗಳಿಂದ ಕಾಂಗ್ರೆಸ್ ದೂರವಾಗಿದೆ. ಅದರೊಂದಿಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ’ ಎಂದರು.

- Advertisement -



Join Whatsapp