ಗುರುಪುರ-ಕೈಕಂಬ ಫ್ಲೈ ಓವರ್ ನಿರ್ಮಿಸಲು ಎಸ್‌ ಡಿಪಿಐ ಆಗ್ರಹ

Prasthutha|

►ಕೈಕಂಬ ಪೇಟೆ ಉಳಿವಿಗಾಗಿ ಪಕ್ಷಾತೀತವಾಗಿ ಹೋರಾಡೋಣ: ಅನ್ವರ್ ಸಾದತ್

- Advertisement -

ಗುರುಪುರ: ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ನಕಟ್ಟೆ-ಸಾಣೂರು ವರೆಗೆ ಚತುಷ್ಪಥ ಕಾಮಗಾರಿಯು  ಗುರುಪುರ ಕೈಕಂಬ ಜಂಕ್ಷನ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು ಹಲವಾರು ಸಮಸ್ಯೆಗಳಿಗೆ ಕಾರಣವಾಗುವ ಅಂಡರ್ ಪಾಸ್ ಮಾದರಿಯ ಕಾಮಗಾರಿಯನ್ನು ಸ್ಥಗಿತಗೊಳಿಸಿ ಚತುಷ್ಪಥ ಫ್ಲೈ ಓವರ್ ನಿರ್ಮಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆಯು ಗುರುಪುರ ಕೈಕಂಬ ಜಂಕ್ಷನ್ ಎಸ್‌ ಡಿಪಿಐ ಗ್ರಾಮ ಪಂಚಾಯತ್ ಸದ್ಯಸ್ಯರ ನೇತೃತ್ವದಲ್ಲಿ ನಡೆಯಿತು.

ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದತ್,  ಅಭಿವೃದ್ಧಿ ಪಥದಲ್ಲಿ ಇರುವ ಗುರುಪುರ ಕೈಕಂಬವನ್ನು ಹೆದ್ದಾರಿ ಪ್ರಾಧಿಕಾರ ತಡೆಗೊಡೆಯನ್ನು ನಿರ್ಮಿಸುವ ಮೂಲಕ  ಪೇಟೆಯನ್ನೇ ಮುಚ್ಚಿಸುವ ಹಂತಕ್ಕೆ ತಲುಪಿದ್ದಾರೆ ಇದರ ವಿರುದ್ಧ‌ ನಾವು ಪಕ್ಷಾತೀತವಾಗಿ ಹೋರಾಟನಡೆಸಬೇಕೆಂದು ಆಗ್ರಹಿಸಿದ್ದಾರೆ.

- Advertisement -

 ಸರ್ಕಾರದ ಯೋಜನೆಗಳು   ವರ್ತಕರ ಹಾಗೂ ಜನಸಾಮಾನ್ಯರಿಗೆ‌ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು ಮತ್ತು ಇದರ ಬಗ್ಗೆ ಸಂಸದರು, ಶಾಸಕರ ಮೌನ ಸಂಶಯದಿಂದ ಕೂಡಿದೆ ಎಂದು ನುಡಿದರು. ಇದು ನಮ್ಮ ಹೋರಾಟದ  ಪ್ರಾಥಮಿಕ‌ ಅಂತ ಮುಂದಿನ ದಿನಗಳಲ್ಲಿ ತಮ್ಮ ಹೋರಾಟದ ಹಾದಿಯನ್ನು ಬದಲಿಸುತ್ತೇವೆ ಎಂದು ಎಚ್ಚರಿಗೆ ನೀಡಿದರು.

ಎಸ್‌ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಪೇಟೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಪೂರ್ವಸಿದ್ಧತೆ ಮಾಡದೆ ತಡೆಗೋಡೆ ಮಾದರಿಯ ಫ್ಲೈ ಓವರ್ ನಿರ್ಮಿಸುತ್ತಿರುವುದನ್ನು ಪ್ರಾಧಿಕಾವು ಈ ಕೂಡಲೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ‌.

ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಎ.ಕೆ.ರಿಯಾಝ್ ಅಧ್ಯಕ್ಷತೆ ವಹಿಸಿದ್ದರು

ಈ ಸಂದರ್ಭದಲ್ಲಿ ಸರಕಾರಕ್ಕೆ ಮತ್ತು ಉನ್ನತ ಅಧಿಕಾರಿಗಳ  ಪರವಾಗಿ ಮಂಗಳೂರು ತಾಲೂಕು ಉಪತಹಶೀಲ್ದಾರರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಮನವಿಯನ್ನು  ಸ್ವೀಕರಿಸಿದರು.

ಪ್ರತಿಭಟನಾ ಸಭೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫಾರ ನಾಸೀರ್ ಎಸ್‌ಡಿಪಿಐ ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ, ಕಾರ್ಯದರ್ಶಿ ಇರ್ಷಾದ್ ಅಡ್ಡೂರು, ಪಂಚಾಯತ್ ಸದಸ್ಯರಾದ ಮಹಮ್ಮದ್ ಅಶ್ರಫ್ ಅಡ್ಡೂರು, ಝಕರಿಯಾ ಶಾಹೀಕ್, ಮನ್ಸೂರ್ ಟಿಬೆಟ್,ದಿಲ್ಶಾದ್, ಬುಶ್ರಾ,ಮರಿಯಮ್ಮ,ಅಝ್ಮೀನಾ,ರೆಹನಾ ಉಪಸ್ಥಿತರಿದ್ದರು.

ಅಸ್ತಾರ್ ಅಡ್ಡೂರು ಕಾರ್ಯಕ್ರಮ ‌ನಿರೂಪಿಸಿದರು.



Join Whatsapp