ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 6) ಚಾಲನೆ ನೀಡಲಿದ್ದಾರೆ.
ಹೌರಾ ಹಾಗೂ ಕೋಲ್ಕತ್ತಾ ಮೆಟ್ರೋ ಸಂಪರ್ಕ ಕಲ್ಪಿಸುವ, ಹೂಗ್ಲಿ ನದಿಯ ನೀರಿನ ಮಧ್ಯೆ ಸಾಗುವ, 16.6 ಕಿಲೋಮೀಟರ್ ಉದ್ದದ ಮೆಟ್ರೋ ಇದಾಗಲಿದ್ದು, ಇದು ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ ಸೇವೆ ಎನಿಸಲಿದೆ.
ಮೆಟ್ರೋ ಸುರಂಗ, ನೀರಿನ ಮಧ್ಯೆಯೇ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿ ಹಲವು ರೀತಿಯಲ್ಲಿ ಎಂಜಿನಿಯರಿಂಗ್ ಹೊಂದಿದೆ. 16.6 ಕಿಲೋಮೀಟರ್ ಮಾರ್ಗದ ಮಧ್ಯೆ ಆರು ಮೆಟ್ರೋ ಸ್ಟೇಷನ್‌ಗಳಿದ್ದು, ಇವುಗಳಲ್ಲಿ ಮೂರು ಭೂಮಿಯ ಕೆಳಗೇ ಇವೆ. ವಾಯುಮಾಲಿನ್ಯ ತಡೆ, ಟ್ರಾಫಿಕ್ ಕಿರಿಕಿರಿ ತಪ್ಪಿಸುವುದು ಹಾಗೂ ಹೊಸ ಪ್ರಯಾಣದ ಅನುಭವದ ದಿಸೆಯಲ್ಲಿ ಅಂಡರ್‌ವಾಟರ್ ಮೆಟ್ರೋ ಸೇವೆ ಮಹತ್ವ ಪಡೆದಿದೆ.