ರಾಜ್ಯಸಭೆ ಚುನಾವಣೆ: ಮತದಾನಕ್ಕೆ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು!

Prasthutha|

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯಲ್ಲಾಪುರ ಬಿಜೆಪಿ ಶಾಸಕ ಅರಬೈಲ್ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾದರು. ಉಳಿದ 222 ಶಾಸಕರು ಮತ ಚಲಾಯಿಸಿದ್ದಾರೆ.

- Advertisement -


ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಿತು. ಕಾಂಗ್ರೆಸ್ನ 134, ಬಿಜೆಪಿಯ 65, ಜೆಡಿಎಸ್ ನ 19, ಇಬ್ಬರು ಪಕ್ಷೇತರರು, ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಲಾ ಒಬ್ಬರು ಮತ ಚಲಾಯಿಸಿದರು.



Join Whatsapp