ಬೆಂಗಳೂರು: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದಲ್ಲ. ಹಿಂದೆ ತುಂಬಾ ಜನ ಸೋತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಕ್ರಾಸ್ ವೋಟ್, ಮೈತ್ರಿ ಕೂಟಕ್ಕೆ ಎರಡನೇ ಸೋಲು ವಿಚಾರವಾಗಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರೂ ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಸೋಮಶೇಖರ್ ನಡೆ ನಿರೀಕ್ಷಿತವೇ ಆಗಿತ್ತು. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕರೆದುಕೊಂಡು ಹೋದವರು ಯಾರು ಎಂದು ನಮಗೂ ಗೊತ್ತಿದೆ ಎಂದರು.
ಇದು ನಮಗೆ ಸೋಲಲ್ಲ. ಇದು ಮೈತ್ರಿ ಮೇಲೂ, ಲೋಕಸಭೆ ಮೇಲೂ ಪರಿಣಾಮ ಬೀರಲ್ಲ. ಹಿಂದೆ ತುಂಬ ಜನ ಸೋತಿಲ್ವಾ? ದೇವೇಗೌಡ್ರು, ವಾಜಪೇಯಿ ಸೋತಿದ್ದಾರೆ. ಇದೇ ಸಿದ್ದರಾಮಯ್ಯ ಸೋತಿಲ್ವಾ? ನನ್ನ ಮಗನೂ ಎರಡು ಸಲ ಸೋತಿದ್ದಾನೆ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಎಂದು ತಿಳಿಸಿದರು.