ನನ್ನನ್ನು ಜೈಲಿಗೆ ಹಾಕಿದರೆ ರಾಜ್ಯ ಉರಿದೀತು: ನಾರಾಯಣ ಗೌಡ

Prasthutha|

ಬೆಳಗಾವಿ: ನಮ್ಮ ಮೇಲೆ ಮೊಕದ್ದಮೆ ಹಾಕಿ ಸರಕಾರ ಜೈಲಿಗೆ ಕಳುಹಿಸುವ ಕೆಲಸ ಮಾಡಿದರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

- Advertisement -

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ರಕ್ಷಣ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಈ ಎಚ್ಚರಿಕೆ ನೀಡಿದರು.

ನಮ್ಮವರೇ ನಮ್ಮ ಧ್ವನಿ ಅಡಗಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗಿನ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅಷ್ಟೇ ನಮ್ಮನ್ನು ಜೈಲಿಗೆ ಕಳುಹಿಸಿಲ್ಲ. ಎಸ್‌.ಎಂ. ಕೃಷ್ಣ, ದೇವೇಗೌಡ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ. ನಾವು ಯಾವತ್ತೂ ಜೈಲಿಗೆ ಹೆದರಿ ಕುಳಿತವರಲ್ಲ. ಡಿ.27ರ ಹೋರಾಟವನ್ನು ಇಡೀ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ ಎಂದರು.



Join Whatsapp