ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಕರೆನ್ಸಿ ಹೊಂದಿದ್ದ ಕಾಸರಗೋಡು ಚೌಕಿ ನಿವಾಸಿ ಮೊಹಮ್ಮದ್ (42) ಮತ್ತು ಮಲಪ್ಪುರಂ ತಿರೂರಂಬಾಡಿಯ ಝೈನುದ್ದೀನ್(50)ನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ವಿದೇಶಿ ಕರೆನ್ಸಿ ಸಹಿತ ಒಟ್ಟು 15 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ವಶಪಡಿಸಲಾದ ಕರೆನ್ಸಿಗಳಲ್ಲಿ ಅಮೆರಿಕನ್ ಡಾಲರ್, ಸೌದಿ ರಿಯಾಲ್ ಮತ್ತು ಮಲೇಶ್ಯದ ರಿಂಗಿಟ್ ಕರೆನ್ಸಿ ನೋಟುಗಳು ಸಹಿತ 7.50 ಲಕ್ಷ ರೂ. ವಿದೇಶಿ ಕರೆನ್ಸಿ ಮತ್ತು 7.50 ಲಕ್ಷ ರೂ.ಭಾರತೀಯ ಕರೆನ್ಸಿಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರೆನ್ಸಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡು ಅವರನ್ನು ಬಿಡುಗಡೆಗೊಳಿಸಲಾಗಿದೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ ಕರೆನ್ಸಿ ಮರಳಿ ಪಡೆಯಬಹುದು. ಇಲ್ಲವಾದಲ್ಲಿ ಸರಕಾರಿ ಖಜಾನೆಗೆ ಸೇರಲಿದೆ.