ಚಂದ್ರಬಾಬು ನಾಯ್ಡು ಕಟೌಟ್‌ಗೆ ರಕ್ತದ ಅಭಿಷೇಕ ಮಾಡಿದ ಟಿಡಿಪಿ ಮುಖಂಡ

Prasthutha|

ಆಂಧ್ರಪ್ರದೇಶ: ವಿಜಯವಾಡದಲ್ಲಿ ಟಿಡಿಪಿ ಮುಖಂಡರೊಬ್ಬರು ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಕಟೌಟ್‌ಗೆ ರಕ್ತದಿಂದ ಅಭಿಷೇಕ ಮಾಡಿದ ಘಟನೆ ನಡೆದಿದೆ.

- Advertisement -

ಬುಡ್ಡ ವೆಂಕಣ್ಣ ಎಂದು ಖ್ಯಾತರಾದ ಬಿ. ವೆಂಕಟೇಶ್ವರ್ ರಾವ್ ತಮ್ಮ ರಕ್ತವನ್ನು ಬಾಟಲಿನಲ್ಲಿ ಸಂಗ್ರಹಿಸಿ ತಂದು ಚಂದ್ರಬಾಬು ನಾಯ್ಡು ಕಟೌಟ್‌ಗೆ ಅಭಿಷೇಕ ಮಾಡಿ ಅಭಿಮಾನ‌ ಮೆರೆದಿದ್ದಾರೆ.

ಬಳಿಕ ಅದೇ ರಕ್ತವನ್ನು ಬಳಸಿ ತಮ್ಮ ಮನೆಯ ಗೋಡೆಯ ಮೇಲೆ ‘ಸಿಬಿಎನ್ (ಚಂದ್ರಬಾಬು ನಾಯ್ಡು) ಜಿಂದಾಬಾದ್ ಎಂದು ಬರೆದಿದ್ದಾರೆ.

- Advertisement -

ಚಂದ್ರಬಾಬು ನಾಯ್ಡು ಅವರು ನನ್ನ ಪಾಲಿನ ದೇವರು ಎಂದ ವೆಂಕಟೇಶ್ವರ ರಾವ್, ಅವರ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ರಕ್ತದಿಂದ ಅಭಿಷೇಕ ಮಾಡಿದ್ದೇನೆ. ನಾಯ್ಡು ಮೇಲಿರುವ ನನ್ನ ಭಕ್ತಿಗೆ ಇದೇ ನಿದರ್ಶನ. ಇದು ಭಕ್ತಿಯ ಪ್ರದರ್ಶನವಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರು ಗೆದ್ದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಬೇಕು. ನಾನು ಕೂಡ ವಿಜಯವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಅಥವಾ ಅನಕಪಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದೇನೆ. ಆದರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ಅವರು ಹೇಳಿದ್ದಾರೆ.



Join Whatsapp